ಗೋಣಿಕೊಪ್ಪ, ಜು. 12: ಇಲ್ಲಿನ ಕಾವೇರಿ ಪದವಿ ಕಾಲೇಜಿನ ಬಿಸಿಎ ವಿಭಾಗಕ್ಕೆ 10 ವರ್ಷ ಪೂರ್ಣ ಗೊಂಡಿದ್ದು, ಇದರ ಸವಿನೆನಪಿಗಾಗಿ ನೂತನವಾಗಿ ಐಟಿ ಕ್ಲಬ್ (ಇನ್ಫರ್ಮೇಷನ್ ಟೆಕ್ನಾಲಜಿ ಕ್ಲಬ್) ಪ್ರಾರಂಭಮಾಡಿದೆ. ಪ್ರಾಂಶುಪಾಲೆ ಪ್ರೊ. ಕುಸುಮಾಧರ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಿ.ಸಿ. ದೇಚಮ್ಮ, ಇತ್ತೀಚಿನ ದಿನಗಳಲ್ಲಿ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಗಳಿದ್ದು ಶೈಕ್ಷಣಿಕ ವಿಷಯಗಳ ಜೊತೆಗೆ ತಮ್ಮ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳುವ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು. ಕಾವೇರಿ ಕಾಲೇಜಿನ ಬಿಸಿಎ ವಿಭಾಗದ ಹಳೇ ವಿದ್ಯಾರ್ಥಿ ವಿಭೀಶ್ ಮಾತನಾಡಿದರು.
ಈ ಸಂದರ್ಭ ಐಟಿ ಕ್ಲಬ್ನ ಅಧ್ಯಕ್ಷರಾಗಿ ವಿದ್ಯಾರ್ಥಿನಿ ಬಿ.ಎಸ್. ಗ್ರೀಷ್ಮಾ, ಉಪಾಧ್ಯಕ್ಷನಾಗಿ ಕವಿ ಕರುಂಬಯ್ಯ, ಸಾಮಾನ್ಯ ಕಾರ್ಯ ದರ್ಶಿಯಾಗಿ ಕೆ.ಹೆಚ್. ಕೀರ್ತನ, ಜಂಟಿ ಕಾರ್ಯದರ್ಶಿಯಾಗಿ ಜಿ.ಕೆ. ಚರಣ್ ಮತ್ತು ಡಿ.ಕೆ. ತಶೀಲ, ನಿರ್ದೇಶಕರಾಗಿ ಎ.ವಿ. ನಮಿತಾಶ್ರೀ, ಗಗನ್ ಗಣಪತಿ, ಎಂ.ಪಿ. ಉತ್ತಯ್ಯ ಹಾಗೂ ಎಂ. ಆರಾಧನಾ ಶರ್ಮ ಆಯ್ಕೆಯಾದರು. ಬಿಸಿಎ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ, ಉಪನ್ಯಾಸಕಿ ಆರ್.ಆರ್. ನೌಮ್ಯ, ಎ.ಕೆ. ಕೃತಿ, ಕೆ.ಕೆ. ಬೋಜಮ್ಮ ಹಾಜರಿದ್ದರು.