ಗೋಣಿಕೊಪ್ಪ ವರದಿ, ಜು. 12: ಪೊನ್ನಂಪೇಟೆ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರು ಪಂಚಾಯಿತಿ ಯೊಂದಿಗೆ ಕೈಜೋಡಿಸಿ ಕಸಮುಕ್ತ ಪಂಚಾಯ್ತಿಯನ್ನಾಗಿಸಲು ಸಹಕರಿಸಬೇಕಿದೆ ಎಂದು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಕಸ ವಿಂಗಡಣೆ ಬಗ್ಗೆ ಚರ್ಚೆ ನಡೆಯಿತು.

ಪಂಚಾಯ್ತಿ ವ್ಯಾಪ್ತಿಯ ಕಸ ಸಮಸ್ಯೆಗೆ ಸಾರ್ವಜನಿಕರು ಪಂಚಾಯಿತಿಯೊಂದಿಗೆ ಸಹಕರಿಸಬೇಕು. ಪಟ್ಟಣದಲ್ಲಿ ಕಸ ವಿಂಗಡಣೆ ಸರಿಯಾಗಿ ಆಗದ ಕಾರಣ, ಸಾರ್ವಜನಿಕರು ಹಸಿ ಹಾಗೂ ಒಣಕಸ ವಿಂಗಡಣೆ ಮಾಡಿ ನೀಡುವಂತೆ ಅಧ್ಯಕ್ಷೆ ಸುಮಿತಾ ಗಣೇಶ್ ಮನವಿ ಮಾಡಿಕೊಂಡರು.

ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ, ಸೆಸ್ಕ್, ಶಿಕ್ಷಣ, ಸಮಾಜ, ಪೊಲೀಸ್ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ ಸುರೇಶ್, ಅಭಿವೃದ್ಧಿ ಅಧಿಕಾರಿ ಆರ್.ಜೆ. ಪುಟ್ಟರಾಜು, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಉಪಸ್ಥಿತರಿದ್ದರು. ನೋಡೆಲ್ ಅಧಿಕಾರಿಯಾಗಿ ಜಿ.ಪಂ. ಎಇಇ ವಿ.ಕೆ. ಮಹಾದೇವ್ ಪಾಲ್ಗೊಂಡಿದ್ದರು.

ಗ್ರಾ.ಪಂ. ಸದಸ್ಯರುಗಳಾದ ಮೂಕಳೇರ ಕಾವೇರಮ್ಮ, ಬೊಟ್ಟಂಗಡ ದಶಮಿ, ಯಶೋದ, ರಶೀದ್, ಜಯಲಕ್ಷ್ಮಿ, ಅಮ್ಮತ್ತೀರ ಸುರೇಶ್, ಲಕ್ಷ್ಮಣ್, ಚಂದ್ರಸಿಂಗ್, ಅಣ್ಣೀರ ಹರೀಶ್, ರಸಿಕ, ರೂಪ ಉತ್ತಪ್ಪ, ಸುಬೈದಾ, ಹ್ಯಾರೀಸ್, ಅನೀಸ್, ಅಡ್ಡಂಡ ಸುನಿಲ್, ಮಂಜು, ರಾಜು, ಸುಮಿ ಇದ್ದರು.