ಕೂಡಿಗೆ, ಜು. 12: ಕೂಡಿಗೆ ಆಂಜೆಲಾ ವಿದ್ಯಾನಿಕೇತನದಲ್ಲಿ ಸಂಚಾರಿ ಪೆÇಲೀಸ್ ಠಾಣಾ ವತಿಯಿಂದ ಖಾಸಗಿ ವಾಹನದಲ್ಲಿ ಶಾಲೆಗೆ ಮಕ್ಕಳನ್ನು ಕಳಿಸುವ ಪೆÇೀಷಕರಿಗೆ ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಸಂಚಾರಿ ಪೆÇಲೀಸ್ ಠಾಣೆಯ ಎಎಸ್‍ಐ ಮೋಹನ್‍ಸುಕುಮಾರ್ ಮಾತನಾಡಿ, ಪೆÇೀಷಕರಿಗೆ ಮಕ್ಕಳ ಸುರಕ್ಷತೆ ಯ ಬಗ್ಗೆ ಮಾಹಿತಿ ನೀಡಿ ದರು. ಚಾಲಕರು ತಮ್ಮ ವಾಹನದ ದಾಖಲೆಯ ಒಂದು ಪ್ರತಿಯನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡಬೇಕಿದೆ. ಮಕ್ಕಳನ್ನು ಕರೆದುಕೊಂಡು ಹೋಗುವ ಚಾಲಕರು ಬದಲಾದಲ್ಲಿ ಪೆÇೀಷಕರಿಗೆ ಮತ್ತು ಶಾಲಾ ಅಭಿವೃದ್ಧಿ ಸಮಿತಿಗೆ ತಿಳಿಸಬೇಕು. ತಮ್ಮ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಪೆÇೀಷಕರು ಬೈಕ್‍ನಲ್ಲಿ ಹೋಗುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸಂಚಾರಿ ಕಾನೂನು ಪಾಲಿಸಬೇಕು ಎಂದರು.

ಈ ಸುರಕ್ಷಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ವಿಜಯ್ ಕ್ಯಾಸೋಲಿನಾ ಮತ್ತು ಶಾಲಾ ಶಿಕ್ಷಕ ವೃಂದ, ಸಂಚಾರಿ ಪೆÇಲೀಸ್ ಠಾಣೆಯ ಮುಖ್ಯ ಪೇದೆ ಸಹದೇವ್, ಶಾಲಾ ಮಕ್ಕಳ ಪೆÇೀಷಕರು ಮತ್ತು ವಾಹನ ಚಾಲಕರು ಭಾಗವಹಿಸಿದ್ದರು.