ಮಡಿಕೇರಿ, ಜು. 12: ಕಾಂಗ್ರೆಸ್ ಮತ್ತು ಜನತಾ ದಳದÀ ಕೆಲ ಶಾಸಕರು ಬಿಜೆಪಿ ಆಮೀಷಕ್ಕೆ ಒಳಗಾಗಿ ರಾಜೀನಾಮೆ ಸಲ್ಲಿಸಿ ಪಲಾಯನ ಗೈದುದನ್ನು ಖಂಡಿಸಿ ಕೊಡಗು ಜಾತ್ಯಾತೀತ ಜನತಾದಳ ನಗರದ ಜನರಲ್ ತಿಮ್ಮಯ್ಯ ವೃತ್ತ ಬಳಿ ಪ್ರತಿಭಟನೆ ನಡೆಸಿತು.

ಜನತಾ ದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲಿ ಕಾರ್ಯಕರ್ತರು ಅತೃಪ್ತ ಶಾಸಕರುಗಳ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಕೆ.ಎಂ.ಗಣೇಶ್ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ದೇಶದ ಪ್ರಜಾಪ್ರಭುತ್ವವನ್ನು ಕಗ್ಗೊಲೆಗೈದಿದ್ದಾರೆ. ಇದರೊಂದಿಗೆ ರಾಜೀನಾಮೆ ಸಲ್ಲಿಸಿದ ಶಾಸಕರು ಅವರವರ ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನಪ್ರಿಯ ವ್ಯಕ್ತಿತ್ವ ಹೊಂದಿದ್ದ ಹೆಚ್. ವಿಶ್ವನಾಥ್ ಅವರು ಒಬ್ಬ ಮೇದಾವಿ, ವಿಚಾರವಂತರು, ಮಾಜಿ ಸಂಸದರು, ಸಚಿವರು ನಮ್ಮ ನಾಯಕರಾಗಿದ್ದು, ಅವರು ಈ ರೀತಿ ವರ್ತಿಸಿರುವದು ಮನಸ್ಸಿಗೆ ಅತೀವ ನೋವುಂಟಾಗಿದೆÉ ಎಂದು ವ್ಯಾಖ್ಯಾನ ಮಾಡಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಪಿ.ಎ. ಯೂಸೂಫ್, ಲೀಲಾಶೇಷಮ್ಮ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ, ವೀರಾಜಪೇಟೆ ತಾಲೂಕು ಅಧÀ್ಯಕ್ಷೆ ಕುಸುಮ ಚಂದ್ರಶೇಖರ, ಖಜಾಂಚಿ ಡೆನ್ನಿ ಬರೋಸ್, ಕಾರ್ಯದರ್ಶಿ ಸುನಿಲ್, ಬಗ್ಗನ ಅನಿಲ್, ಮಡಿಕೇರಿ ನಗರ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷೆ ಬೆನ್ನಿ ಜೆಸಿಂತ ಡಿಸಿಲ್ವ ಮೊದಲಾದವರು ಪಾಲ್ಗೊಂಡಿದ್ದರು.