ಮಡಿಕೇರಿ, ಸೆ. 15: ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ‘ಆವರ್ತ ಕೋಷ್ಟಕದ ರಾಸಾಯನಿಕ ಧಾತುಗಳು ಮನುಕುಲ ಮೇಲಿನ ಪ್ರಭಾವ’ ಕುರಿತು ಡಯಟ್ ಕೂಡಿಗೆಯಲ್ಲಿ ಇತ್ತೀಚೆಗೆ ನಡೆದ ವಿಚಾರ ಮಂಡನೆಯಲ್ಲಿ ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ಆಂಗ್ಲ ಮಾಧ್ಯಮದ 10ನೇ ತರಗತಿ ವಿದ್ಯಾರ್ಥಿ ಎಂ.ಕೆ. ಶ್ರೀವತ್ಸ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾನೆ.

ಈತ ಚೇರಂಬಾಣೆಯ ಅರುಣ ಪದವಿ ಪೂರ್ವ ವಿದ್ಯಾಲಯದ ಹಿಂದಿ ಅಧ್ಯಾಪಕ ಎಂ.ಎಸ್. ಕೃಷ್ಣಮೂರ್ತಿ ಮತ್ತು ಚೇರಂಬಾಣೆಯ ಸರಕಾರಿ ಶಾಲೆಯ ಶಿಕ್ಷಕಿ ಎಂ.ಎಸ್. ಪರಿಮಳ ದಂಪತಿಯ ಪುತ್ರ.ಸೋಮವಾರಪೇಟೆ: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಫಾ. ವಿನ್ಸೆಂಟ್ ಮೊಂಥೆರೋ ಅವರು ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ಸಕಾಲದಲ್ಲಿ ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಫಾ. ಎಂ.ರಾಯಪ್ಪ, ಪ್ರಾಂಶುಪಾಲ ಅಂತೋಣಿರಾಜ್ ಮತ್ತು ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಕಲ್ಪಶ್ರೀ ಹಾಗೂ ಲೀನಾ ಅವರುಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ಶಿಕ್ಷಕರಿಗಾಗಿ ಆಯೋಜಿಸಿದ್ದರು. ಕಾರ್ಯಕ್ರಮವನ್ನು ಬಿ.ಸಿ.ಎ. ವಿಭಾಗದ ಸುಹಾನ ಮತ್ತು ಸಿಂಚನ ನಿರ್ವಹಿಸಿದರು.ಗೋಣಿಕೊಪ್ಪಲು: ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣೆಗೆಯಲ್ಲಿ ಭಾರತ ಬಹಳಷ್ಟು ಸಾಧನೆ ಮಾಡಿದೆ. ಇದರ ಹಿಂದೆ ಹಿರಿಯ ತಜ್ಞ ವಿದ್ವಾಂಸರ ಪರಿಶ್ರಮವಿದೆ. ಇಂತಹ ಹಿರಿಯರ ಸಾಧನೆಗಳನ್ನು ಅಧ್ಯಯನ ಮಾಡುವ ಮೂಲಕ ತಾವೂ ಆ ದಾರಿಯತ್ತ ಸಾಗಬೇಕು ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಹೇಳಿದರು.

ಪೊನ್ನಂಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಯೋಧ ಹಾಗೂ ಪೊನ್ನಂಪೇಟೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಟಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲೆ ಎ.ಕೆ. ಪಾರ್ವತಿ ಮಾತನಾಡಿ, ವಿದ್ಯಾರ್ಥಿಗಳ ಬಹುಮುಖ ಬೆಳವಣಿಗೆಗೆ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘ ನೆರವಾಗಲಿದೆ ಎಂದು ಹೇಳಿದರು. ಹಿರಿಯ ಉಪನ್ಯಾಸಕ ಸುರೇಶ್ ಬಾಬು ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪಂದ್ಯಂಡ ಹರೀಶ್, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕ ಇಬ್ರಾಹಿಂ, ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಆರ್. ರಮೇಶ್, ಗ್ರಂಥಪಾಲಕ ಸಿದ್ದಲಿಂಗಸ್ವಾಮಿ, ಉಪನ್ಯಾಸಕರಾದ ಸಬಿತಾ. ಗೋಪಿನಾಥ್, ತಮ್ಮಯ್ಯ, ಡಾ. ರಾಜೇಂದ್ರ ಪ್ರಸಾದ್, ಹರೀಶ್, ಶಶಿಧರ್, ಪಲ್ಲವಿ, ಪ್ರಮಿತಾ ಹಾಜರಿದ್ದರು. ಕನ್ನಡ ಎಂ.ಎ. ಪದವಿಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ 8 ಚಿನ್ನದ ಪದಕ ಗಳಿಸಿದ ಕಾಲೇಜಿನ ಉಪನ್ಯಾಸಕಿ ಪಿ.ಎಲ್. ಪೂಜಾ ಅವರನ್ನು ಸನ್ಮಾನಿಸಲಾಯಿತು.