ಚೆಟ್ಟಳ್ಳಿ, ಸೆ. 17: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಸಿದ್ದಾಪುರ ಸೆಕ್ಟರ್ ವತಿಯಿಂದ ಉಲಾಝ್ ಮತ್ತು ಕ್ಯೂ ಟೀಂ ಕ್ಯಾಂಪ್ ಕಾರ್ಯಕ್ರಮ ನೆಲ್ಲಿಹುದಿಕೇರಿಯ ದಾರುನ್ನಜಾತ್ ಸುನ್ನಿ ಮದರಸದಲ್ಲಿ ನಡೆಯಿತು.

ಸಿದ್ದಾಪುರ ಸೆಕ್ಟರ್ ಅಧ್ಯಕ್ಷ ರಝಾಖ್ ಸಹದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಯ್ಯದ್ ವಿ.ಪಿ.ಎಸ್ ಶಿಹಾಬ್ ತಂಙಳ್ ಉದ್ಘಾಟಿಸಿದರು. ಉಲಾಝ್ ಕ್ಯಾಂಪ್ ತರಗತಿ ಸಿದ್ದಾಪುರ ಸೆಕ್ಟರ್ ಸಮಿತಿ ಉಪಾಧ್ಯಕ್ಷ ಹಂಝ ರಹ್ಮಾನಿ ಹಾಗೂ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಸಖಾಫಿ ನಡೆಸಿದರು. ಕ್ಯೂ ಟೀಂ ಕ್ಯಾಂಪ್ ತರಗತಿಯನ್ನು ವೀರಾಜಪೇಟೆ ಡಿವಿಷನ್ ಅಧ್ಯಕ್ಷ ಝುಬೈರ್ ಸಅದಿ ಅಲ್ ಅಫ್ಳಲಿ ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ನಿಝಾಮ್ ಕಂಡಕರೆ ಸ್ವಾಗತಿಸಿ, ವಂದಿಸಿದರು.