ಮಡಿಕೇರಿ, ಸೆ. 17: ಕಾವಾಡಿ ಶ್ರೀ ಭಗವತಿ ದೇವಸ್ಥಾನದಿಂದ ಅಮ್ಮತ್ತಿಯ ಮುಖ್ಯ ರಸ್ತೆ, ಹೊಸೂರು, ಪಾಲಿಬೆಟ್ಟ ರಸ್ತೆಗಳಲ್ಲಿ ಗುಂಡಿಗಳೇ ಅಧಿಕವಾಗಿದ್ದು, ಲೋಕೋಪಯೋಗಿ ಇಲಾಖೆಯ ಗಮನಕ್ಕೆ ಹಲವಾರು ಬಾರಿ ತಂದಿದ್ದರೂ, ಈ ಬಗ್ಗೆ ಗಮನ ಹರಿಸಿಲ್ಲ ಎಂದು ಅಸಮಾಧಾನಗೊಂಡು ಅಮ್ಮತ್ತಿಯ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ರಮೇಶ್, ಗಣೇಶ್, ಪಾಪಣ್ಣ, ಮಂಜು, ಕೃಷ್ಣ, ಆನಂದ್, ಡೇವಿಡ್, ರಿಚರ್ಡ್, ಉನ್ನಿ, ಲತೀಫ್, ಬಾಲಕೃಷ್ಣ, ಕೌ. ಸುರೇಶ್ ಇವರುಗಳು ಗುಂಡಿಗಳಿಗೆ ಮಣ್ಣನ್ನು ತುಂಬಿ ಶ್ರಮದಾನದ ಮೂಲಕ ಲೋಕೋಪಯೋಗಿ ಇಲಾಖೆ ವಿರುದ್ಧ ಪ್ರತಿಭಟಿಸಿದರು.