ಗೋಣಿಕೊಪ್ಪಲು, ಸೆ.16 : ಪೆÇನ್ನಂಪೇಟೆ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಮೂರು ದಿನಗಳ ಕಾಲ ಜರುಗಿದ ತಾಲೂಕು ಪ್ರೌಢಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಪೆÇನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಕಿ, ಟೇಬಲ್ ಟೆನೀಸ್, ಚೆಸ್ ಹಾಗೂ ಅಥ್ಲೆಟಿಕ್ಸ್‍ನ 800 ಮೀ.ಓಟ,ಡಿಸ್‍ಕಸ್ ಥ್ರೋ ಹಾಗೂ ಟ್ರಿಪಲ್ ಜಂಪ್‍ನಲ್ಲಿ ಪ್ರಥಮ ಸ್ಥಾನ ಗೆದ್ದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರೆ, ಶಟಲ್ ಕಾಕ್, ಬಾಸ್ಕೆಟ್ ಬಾಲ್, ಹ್ಯಾಂಡ್‍ಬಾಲ್‍ನಲ್ಲಿ ರನ್ನರ್ಸ್ ಅಪ್ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ. ವಲಯ ಮಟ್ಟದ ಕ್ರೀಡಾಕೂಟದಲ್ಲಿಯೂ ಸಾಧನೆ ಮಾಡಿದ ಸಂತ ಅಂತೋಣಿ ಶಾಲಾ ವಿದ್ಯಾರ್ಥಿಗಳು ಹಾಕಿ,ಬಾಸ್ಕೆಟ್ ಬಾಲ್, ಹ್ಯಾಂಡ್‍ಬಾಲ್, ಚೆಸ್, ಟೇಬಲ್ ಟೆನೀಸ್, ಶಟಲ್‍ಕಾಕ್ ಸ್ಪರ್ಧೆಯಲ್ಲಿ ಫೈನಲ್‍ನಲ್ಲಿ ಜಯಗಳಿಸಿದ್ದಾರೆ.
ಹಾಕಿ ಪುರುಷರ ವಿಭಾಗದಲ್ಲಿ ಬಿಪಿನ್ ನಾಯಕತ್ವದ ತಂಡ ಜಯಗಳಿಸಿದೆ.ಬಾಸ್ಕೆಟ್ ಬಾಲ್ ಹಾಗೂ ಹ್ಯಾಂಡ್‍ಬಾಲ್‍ನಲ್ಲಿ ಸಿ.ಎಸ್.ಮುತ್ತಮ್ಮ ನಾಯಕತ್ವದ ತಂಡ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿದೆ.ಟೇಬಲ್ ಟೆನೀಸ್ ಮಹಿಳಾ ವಿಭಾಗದಲ್ಲಿ ದಿಯಾ ಹಾಗೂ ಮೌಲ್ಯ ಫೈನಲ್ಸ್‍ನಲ್ಲಿ ಜಯಗಳಿಸಿದ್ದಾರೆ. ಅಥ್ಲೆಟಿಕ್ಸ್ ಮಹಿಳಾ ವಿಭಾಗದ ಡಿಸ್ಕಸ್ ಎಸೆತದಲ್ಲಿ ಮುತ್ತಮ್ಮ ಸಿ.ಎಸ್. ಮತ್ತು ಟ್ರಿಪಲ್ ಜಂಪ್‍ನಲ್ಲಿ ತಂಗಮ್ಮ ಸಾಧನೆ ಮಾಡಿದ್ದಾರೆ. ಚೆಸ್‍ನಲ್ಲಿ ರಿತಿಕ್ ಮತ್ತು ತಂಗಮ್ಮ, 800 ಮೀ.ನಲ್ಲಿ ಬಿಪಿನ್ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪ್ರಾಂಶುಪಾಲ ಫಾ. ಡೇವಿಡ್ ಸಗಾಯರಾಜ್ ತಿಳಿಸಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿಯೂ ಸಾಧನೆ
ಪ್ರತಿಭಾ ಕಾರಂಜಿಯಲ್ಲಿ ಭರತನಾಟ್ಯದಲ್ಲಿ ವಿದ್ಯಾರ್ಥಿನಿ ಅರುಜಾ ಪ್ರಥಮ, ಧಾರ್ಮಿಕ ಪಠಣದಲ್ಲಿ ಉರ್ದು ಭಾಷೆಯಲ್ಲಿ ಎ.ಸಿಯಾಬ್ ಪ್ರಥಮ ಹಾಗೂ ಸಂಸ್ಕೃತದಲ್ಲಿ ಕೆ.ಡಿ.ತಿಮ್ಮಯ್ಯ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ. ಆಂಗ್ಲ ಭಾಷಣ ಸ್ಪರ್ಧೆಯಲ್ಲಿ ಶಾಲೆಯ ನಂದಿತಾ, ಹಿಂದಿ ವಿಭಾಗದಲ್ಲಿ ಲಾಸ್ಯ ಪ್ರಥಮ ಸ್ಥಾನ ಗಳಿಸಿದ್ದು, ಗುಂಪು ನೃತ್ಯದಲ್ಲಿ ರಚನಾ ಮತ್ತು ತಂಡ ಜಯಗಳಿಸಿರುವದಾಗಿ ಮಾಹಿತಿ ನೀಡಿದ್ದಾರೆ.
-ವರದಿ: ಟಿ.ಎಲ್.ಎಸ್.