ಸಿದ್ದಾಪುರ, ಸೆ. 17: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ಸಂಬಂಧ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ರವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ತ್ಯಾಜ್ಯ ವಸ್ತುಗಳು ಮಿತಿಮೀರಿದ್ದು ಇದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು. ಕಸ ವಿಲೇವಾರಿ ಮಾಡಲು ಸೂಕ್ತ ಜಾಗವನ್ನು ಗುರುತಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಮಾತನಾಡಿ, ನೆಲ್ಲಿಹುದಿಕೇರಿ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಇರುವ ಕಸಗಳನ್ನು ತ್ಯಾಜ್ಯಗಳನ್ನು ರಸ್ತೆಗಳಿಗೆ ಎಸೆಯ ಬಾರದೆಂದು ತಿಳಿಸಿದರು. ಕಸಗಳನ್ನು ಬೇರ್ಪಡಿಸಿ ಪಂಚಾಯಿತಿಗೆ ಸೇರಿದ ವಾಹನಗಳು ಬರುವ ಸಂದರ್ಭದಲ್ಲಿ ಕಸಗಳನ್ನು ವಾಹನಕ್ಕೆ ಸುರಿದು ಕಳಿಸುವಂತೆ ಸಲಹೆ ನೀಡಿದರು ಕಸ ವಿಲೇವಾರಿಗೆ ಸೂಕ್ತ ರೀತಿಯ ಜಾಗವನ್ನು ಗುರುತಿಸಲು ಪ್ರಯತ್ನಿ ಸುವದಾಗಿ ಮಾಹಿತಿ ನೀಡಿದರು.

ಗ್ರಾಮಸ್ಥರು ಪಂಚಾಯಿತಿಗೆ ಸಹಕಾರ ನೀಡುವಂತೆ ತಿಳಿಸಿದರು ಇನ್ನೋರ್ವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಮಾತನಾಡಿ, ಕಸವಿಲೇವಾರಿ ಮಾಡಲು ಪಾಲಿಬೆಟ್ಟ ಗ್ರಾಮಪಂಚಾಯಿತಿಯಲ್ಲಿ ವಿನೂತನ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಿಮೆ ಜಾಗದಲ್ಲಿ ಕಸವಿಲೇವಾರಿ ಮಾಡಲು ವ್ಯವಸ್ಥೆಯನ್ನು ಕಲ್ಪಿಸುವಂತೆ ಸಲಹೆ ನೀಡಿದರು ಇದೇ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ವಿವಿಧ ಸಲಹೆಗಳನ್ನು ನೀಡಿದರು ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಉಪಾಧ್ಯಕ್ಷ ಸಫೀಯಾ, ಗ್ರಾಮ ಪಂಚಾಯಿತಿ ಸದಸ್ಯರುಗಳು ಗ್ರಾಮದ ಪ್ರಮುಖರಾದ ಮಣಿ ಮಹಮ್ಮದ್ ಇತರರು ಹಾಜರಿದ್ದರು.