ಮಡಿಕೇರಿ, ಸೆ. 16: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಇಂದು ದಸರಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ದಸರಾ ಸಮಿತಿಯ ಪೂರ್ವಭಾವಿ ಸಭೆ ನಡೆದು, ದಸರಾ ಪ್ರಯುಕ್ತ ನಡೆಯ ಬೇಕಾದ ವಿವಿಧ ಕಾರ್ಯ ಕ್ರಮಗಳನ್ನು ನಿಗದಿ ಮಾಡಲಾಯಿತು.ತಾ. 21 ಹಾಗೂ 22 ರಂದು ದಸರಾ ಕ್ರೀಡಾಕೂಟ ನಡೆಯಲಿದ್ದು, ತಾ. 29 ರಿಂದ ಸಾಂಪ್ರದಾಯಿಕ ಕರಗ ಉತ್ಸವ ಆರಂಭವಾಗಲಿದೆ. ತಾ. 30 ರಿಂದ ಗಾಂಧಿ ಮೈದಾನದ ಭವ್ಯ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭ ಗೊಳ್ಳಲಿದೆ. ಅ. 1 ರಂದು ಕಬಡ್ಡಿ ಪಂದ್ಯಾಟ, ಅ. 2 ರಂದು ರೋಟರಿ ಮಿಸ್ಟಿಹಿಲ್ಸ್ ಸಹಯೋಗದಲ್ಲಿ ಮಕ್ಕಳ ದಸರಾ ಏರ್ಪಡಿಸಲಾಗಿದ್ದು, ಅ. 3 ರಂದು ಕೊಡಗು ಜಾನಪದ ಪರಿಷತ್‍ನಿಂದ ಜಾನಪದ ಉತ್ಸವ ನೆರವೇರಲಿದೆ. ಅ. 4 ರಂದು ದಸರಾ ಬಹುಭಾಷಾ ಕವಿಗೋಷ್ಠಿ, ಅ. 5 ರಂದು ಯುವ ದಸರಾ ಹಾಗೂ ಅ. 6 ರಂದು ಮಹಿಳಾ ದಸರಾವನ್ನು ನಿಗದಿಪಡಿಸ ಲಾಗಿದ್ದು, ಇವುಗಳೊಂದಿಗೆ 9 ದಿನಗಳ ಕಾಲ ಸಾಂಸ್ಕøತಿಕ ವೈವಿಧ್ಯ ಹಾಗೂ ಅ. 7ರಂದು ಆಯುಧ ಪೂಜೆ, ಅ 8ರಂದು ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆ ನಡೆಯಲಿದ್ದು, ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸಭೆ ತೀರ್ಮಾನಿಸಿತು.
ಕರಗ ಪ್ರದಕ್ಷಿಣೆ, ಮಂಟಪ ಶೋಭಾಯಾತ್ರೆ ನಡೆಯುವ ರಸ್ತೆಗಳನ್ನು ದುರಸ್ತಿಪಡಿಸಬೇಕು, ಉತ್ಸವನದ
(ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯ ಸ್ವಚ್ಛತೆಗೆ ಒತ್ತು ನೀಡಬೇಕು, ಹೆಚ್ಚುವರಿ ಶೌಚಾಲಯ ನಿರ್ಮಿಸಬೇಕು, ಬೀದಿ ದೀಪಗಳನ್ನು ಸರಿಪಡಿಸಬೇಕು, ಪ್ರವಾಸಿ ಸ್ಥಳಗಳಲ್ಲಿ ಯಾವದೇ ತೊಡಕುಂಟಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು, ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಉತ್ಸವಕ್ಕೆ ಮೂರು ದಿನ ಇರುವಾಗ ದೀಪಾಲಂಕಾರ ಮಾಡಿಸಬೇಕು, ನಗರವ್ಯಾಪ್ತಿಯ ಎಲ್ಲಾ ಬ್ಯಾಂಕ್‍ಗಳು ಕೂಡ ಉತ್ಸವದಲ್ಲಿ ತೊಡಗಿಸಿಕೊಳ್ಳು ವಂತೆ ಮಾಡಬೇಕು, ಕರಗ ಉತ್ಸವದ ಆರಂಭದ ದಿನ ಮಹದೇವಪೇಟೆ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಬೇಕು, ಗಾಂಧಿ ಮೈದಾನ ದಲ್ಲಿ ಪೆಂಡಾಲ್ ಅಳವಡಿಕೆ ಸಂಬಂಧ ಶೀಘ್ರವಾಗಿ ಟೆಂಡರ್ ಕರೆಯಬೇಕು, ದಸರಾ ಉತ್ಸವಕ್ಕಾಗಿ ಹೆಚ್ಚುವರಿ ಸರ್ಕಾರಿ ಬಸ್‍ಗಳನ್ನು ಜನತೆಗೆ ಒದಗಿಸಬೇಕು, ಮಡಿಕೇರಿ ದಸರಾ ಬಗ್ಗೆ ಸೂಕ್ತ ಪ್ರಚಾರ ಕಾರ್ಯಕೈಗೊಳ್ಳಬೇಕು. ಎಂಬಿತ್ಯಾದಿ ಸಲಹೆಗಳನ್ನು ದಸರಾ ಸಮಿತಿ ಪದಾಧಿಕಾರಿಗಳಾದ ರಾಬಿನ್ (ಮೊದಲ ಪುಟದಿಂದ) ಹಿನ್ನೆಲೆಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯ ಸ್ವಚ್ಛತೆಗೆ ಒತ್ತು ನೀಡಬೇಕು, ಹೆಚ್ಚುವರಿ ಶೌಚಾಲಯ ನಿರ್ಮಿಸಬೇಕು, ಬೀದಿ ದೀಪಗಳನ್ನು ಸರಿಪಡಿಸಬೇಕು, ಪ್ರವಾಸಿ ಸ್ಥಳಗಳಲ್ಲಿ ಯಾವದೇ ತೊಡಕುಂಟಾಗದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು, ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಉತ್ಸವಕ್ಕೆ ಮೂರು ದಿನ ಇರುವಾಗ ದೀಪಾಲಂಕಾರ ಮಾಡಿಸಬೇಕು, ನಗರವ್ಯಾಪ್ತಿಯ ಎಲ್ಲಾ ಬ್ಯಾಂಕ್‍ಗಳು ಕೂಡ ಉತ್ಸವದಲ್ಲಿ ತೊಡಗಿಸಿಕೊಳ್ಳು ವಂತೆ ಮಾಡಬೇಕು, ಕರಗ ಉತ್ಸವದ ಆರಂಭದ ದಿನ ಮಹದೇವಪೇಟೆ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಬೇಕು, ಗಾಂಧಿ ಮೈದಾನ ದಲ್ಲಿ ಪೆಂಡಾಲ್ ಅಳವಡಿಕೆ ಸಂಬಂಧ ಶೀಘ್ರವಾಗಿ ಟೆಂಡರ್ ಕರೆಯಬೇಕು, ದಸರಾ ಉತ್ಸವಕ್ಕಾಗಿ ಹೆಚ್ಚುವರಿ ಸರ್ಕಾರಿ ಬಸ್‍ಗಳನ್ನು ಜನತೆಗೆ ಒದಗಿಸಬೇಕು, ಮಡಿಕೇರಿ ದಸರಾ ಬಗ್ಗೆ ಸೂಕ್ತ ಪ್ರಚಾರ ಕಾರ್ಯಕೈಗೊಳ್ಳಬೇಕು. ಎಂಬಿತ್ಯಾದಿ ಸಲಹೆಗಳನ್ನು ದಸರಾ ಸಮಿತಿ ಪದಾಧಿಕಾರಿಗಳಾದ ರಾಬಿನ್ ಪೆಂಡಾಲ್ ಅಳವಡಿಕೆ ಸಂಬಂಧ ಟೆಂಡರ್ ಪ್ರಕ್ರಿಯೆಗಳನ್ನು ಸದ್ಯದಲ್ಲಿಯೇ ನಡೆಸಲಾಗುವದು. ದಸರಾ ಆಹ್ವಾನ ಪತ್ರಿಕೆ ತಯಾರಿ ಸಂಬಂಧ ಶಿಷ್ಟಾಚಾರ ಪಾಲನೆ ಪರಿಶೀಲನೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯವರಿಗೆ ಜವಾಬ್ದಾರಿ ವಹಿಸಲಾಗುವದು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೂ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಸಲಹೆಯಿತ್ತರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಮಾತನಾಡಿ, ಮಂಟಪಗಳ ವಾಹನಗಳಿಗೆ ಪಾಸ್ ನೀಡುವ ಸಂಬಂಧ; ವಾಹನ ಸಂಚಾರದಲ್ಲಿ ಮಾರ್ಪಾಡುಗಳಾಗಬೇಕಾದಲ್ಲಿ ಪೊಲೀಸ್ ಇಲಾಖೆಗೆ ಕೂಡಲೇ ಮನವಿ ಸಲ್ಲಿಸುವಂತೆ ಹೇಳಿದರು. ದಶಮಂಟಪಗಳ ಸ್ಪರ್ಧೆಯಲ್ಲಿ ಯಾವದೇ ತೊಂದರೆಗಳಾಗದಂತೆ ದಶಮಂಟಪ ಸಮಿತಿ ಎಚ್ಚರವಹಿಸ ಬೇಕೆಂದು ನುಡಿದರು. ವೇದಿಕೆಯಲ್ಲಿ ಆಯುಕ್ತ ರಮೇಶ್, ಯೋಜನಾ ನಿರ್ದೇಶಕ ಗೋಪಾಲಕೃಷ್ಣ ಉಪಸ್ಥಿತರಿದ್ದರು.