ಕುಶಾಲನಗರ: ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವ ಸೂಕ್ತ ವೇದಿಕೆಯಾಗಿದೆ ಎಂದು ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಬಿ.ಬಿ. ಸಾವಿತ್ರಿ ಹೇಳಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಸರಕಾರಿ ಪಿ.ಯು. ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ಕುಶಾಲನಗರ: ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವ ಸೂಕ್ತ ವೇದಿಕೆಯಾಗಿದೆ ಎಂದು ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಬಿ.ಬಿ. ಸಾವಿತ್ರಿ ಹೇಳಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಸರಕಾರಿ ಪಿ.ಯು. ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ಕ್ರೀಡಾಕೂಟ ನಡೆಯಿತು.
ಸಂಪಾಜೆ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳು ಭಾಗವಹಿಸಿ ಹುಡುಗರ ವಾಲಿಬಾಲ್ ಪ್ರಥಮ, ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನವನ್ನು ಪಡೆಯಿತು, ್ಠ4100 ರಿಲೆಯಲ್ಲಿ ಬಾಲಕಿಯರು ಪ್ರಥಮ ಸ್ಥಾನ ಪಡೆದರು, ಬಾಲಕರ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನವನ್ನು ಅಕ್ಷಯ್ ಕುಮಾರ್ ಟಿ.ಬಿ, ಬಾಲಕಿಯರ ಉದ್ದ ಜಿಗಿತದಲ್ಲಿ ನವ್ಯಾ ಹೆಚ್.ಎಸ್ ದ್ವಿತೀಯ ಸ್ಥಾನ, ಬಾಲಕಿಯರ ಎತ್ತರ ಜಿಗಿತದಲ್ಲಿ ಗ್ರೀಷ್ಮ ಟಿ.ಬಿ, ಬಾಲಕಿಯರ 600 ಮೀ. ಓಟದಲ್ಲಿ ನವ್ಯ ಹೆಚ್.ಎಸ್. ಪ್ರಥಮ ಸ್ಥಾನ, 100 ಮೀ ಓಟದಲ್ಲಿ ಭವ್ಯಶ್ರೀ ಕೆ.ಜಿ. ದ್ವಿತೀಯ ಸ್ಥಾನವನ್ನು ಪಡೆದು ಕೊಂಡರು. ಶಾಲಾ ಶಿಕ್ಷಕÀ ಚೇತನ್, ದೈಹಿಕ ಶಿಕ್ಷಕಿ ಕವಿತಾ ಭಾಗವಹಿಸಿದ್ದರು.
ಸುಂಟಿಕೊಪ್ಪ: ಮಕ್ಕಳ ಪ್ರತಿಭೆಗಳನ್ನು ಹೊರಹೊಮ್ಮಿಸಲು ಪ್ರತಿಭಾಕಾರಂಜಿ ಉತ್ತಮ ವೇದಿಕೆ ಎಂದು ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಆಡಳಿತ ಮಂಳಿ ಕಾರ್ಯದರ್ಶಿ ಸಿ.ಎ. ಉತ್ತಯ್ಯ ಹೇಳಿದರು.
ಸುಂಟಿಕೊಪ್ಪ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಸುಂಟಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಕೊಡಗರಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಬ್ಬಾಸ್ ಉದ್ಘಾಟಿಸಿದರು.
ಕ್ಲಸ್ಟರ್ ಸಿಆರ್‍ಪಿ ಪುರುಷೋತ್ತಮ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ಬಿ. ಪ್ರಕಾಶ್ ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಸ್.ಕೆ. ಸೌಭಾಗ್ಯ, ಮಾದಾಪುರ ಕ್ಲಸ್ಟರ್‍ನ ಸಿಆರ್‍ಪಿ ವಸಂತ್‍ಕುಮಾರ್ ಉಪಸ್ಥಿತರಿದ್ದರು.
3 ವಿಭಾಗದಲ್ಲಿ ವೈಯಕ್ತಿಕ ಮತ್ತು ಸಾಮೂಹಿಕ ಸ್ಪರ್ಧೆಗಳು ನಡೆದವು. ಕ್ಲಸ್ಟರಿನ ವಿವಿಧ ಶಾಲೆಗಳಿಂದ 600 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೇರಿ ಫಾತೀಮಾ ಸ್ವಾಗತಿಸಿದರು. ಶಿಕ್ಷಕ ರಾಜಶೇಖರ ವಂದಿಸಿದರು.
ನಾಪೆÇೀಕ್ಲು: ನಾಪೆÇೀಕ್ಲು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನಾಪೆÇೀಕ್ಲು ಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾ ನಡೆಯಿತು. ಜಾಥಾದ ನೇತೃತ್ವವನ್ನು ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ ವಹಿಸಿದ್ದರು. ಉಪನ್ಯಾಸಕರಾದ ಅವನಿಜಾ, ಸರಳ, ಸುಚಿತ್ರಾ, ಶೈಲಜಾ ಮತ್ತಿತರರು ಪಾಲ್ಗೊಂಡಿದ್ದರು.ಕುಶಾಲನಗರ: ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ವಿಭಾಗದ ಕ್ರೀಡಾಕೂಟ ಸ್ಪರ್ಧೆಗಳಲ್ಲಿ ಕುಶಾಲನಗರದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರ ತಂಡಗಳು ಸಿಂಗಲ್ಸ್ ಮತ್ತು ಡಬಲ್ಸ್ ಶಟಲ್ ಬ್ಯಾಡ್ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹ್ಯಾಂಡ್ ಬಾಲ್‍ನಲ್ಲಿ ಬಾಲಕರು ಪ್ರಥಮ ಸ್ಥಾನ ಪಡೆದಿದ್ದಾರೆ.
ಸೋಮವಾರಪೇಟೆ: ಇಲ್ಲಿನ ಓ.ಎಲ್.ವಿ. ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಜಯಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಲೂರು-ಸಿದ್ದಾಪುರದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ದಿವಿನ್, ರೆನಿಟ ಪಿಂಟೋ, ಗಾನವಿ, ಕೆ.ಆರ್. ಪೂಜಿತ, ಡಿ.ಡಿ. ದೀಕ್ಷಿತ್, ಕೆ.ಟಿ. ಮೇಘನಾ, ರೋಷನ್, ಚುಕ್ಕಿ, ಕವನ ಅವರುಗಳು ವಿವಿಧ ಕ್ರೀಡೆಗಳಾದ ಹ್ಯಾಂಡ್‍ಬಾಲ್, ಚೆಸ್, ಉದ್ದಜಿಗಿತ, ರಿಲೇ, ಚಕ್ರ ಎಸೆತ, ಹಾಕಿ, ಬಾಸ್ಕೆಟ್‍ಬಾಲ್, 100, 200,400 ಮೀ. ಓಟ, ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀಮಂಗಲ: ಕುಶಾಲನಗರ ಸಮೀಪ ಕೂಡಿಗೆಯಲ್ಲಿರುವ ಡಯಟ್‍ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಹಾಗೂ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ವೀರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ರೂಟ್ಸ್ ಎಜುಕೇಶನಲ್ ಟ್ರಸ್ಟ್‍ನ ವಿದ್ಯಾರ್ಥಿಯಾದ ಎಂ.ಎಂ. ಭುವನ್ ವಿಜ್ಞಾನ ವಿಚಾರಗೋಷ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ನಾಟಕವಾದ ಹಸಿರು ಮತ್ತು ಶುದ್ಧ ಶಕ್ತಿಗಳು ಎಂಬ ವಿಚಾರದಲ್ಲಿ ಈ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆ: ಮಕ್ಕಳನ್ನು ಶಾಲೆಗೆ ಕಳುಹಿಸಿದರಷ್ಟೆ ಪೋಷಕರ ಜವಾಬ್ದಾರಿ ಮುಗಿಯದು, ಅವರ ಹಾಜರಾತಿ ಹಾಗೂ ಪ್ರಗತಿ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸುವ ಮೂಲಕ ಕಲಿಕೆಗೆ ಪ್ರೋತ್ಸಾಹ ನೀಡಬೇಕೆಂದು ಇಲ್ಲಿನ ಪದವೀಧರ ಮುಖ್ಯಶಿಕ್ಷಕಿ ಎಂ.ಜೆ. ಅಣ್ಣಮ್ಮ ಕರೆ ನೀಡಿದರು.
ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪೋಷಕರ ಸಭೆ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿಯೂ ಗುಣ ಮಟ್ಟದ ಶಿಕ್ಷಣದೊಂದಿಗೆ ಆಂಗ್ಲ ಮಾಧ್ಯಮವನ್ನು ಕಲಿಸುವ ಯೋಜನೆಯು ಕಾರ್ಯರೂಪಕ್ಕೆ ಬಂದಿರುವದು ಜನ ಸಾಮಾನ್ಯರಿಗೆ ವರದಾನವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಶಾಲ ಮಾತನಾಡಿ, ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುವಲ್ಲಿ ಪೋಷಕರ ಪಾತ್ರ ಅಪಾರ. ಪೋಷಕರ, ಶಿಕ್ಷಕರ, ವಿದ್ಯಾರ್ಥಿಗಳ ಸಹಕಾರ ಹಾಗೂ ಪ್ರೋತ್ಸಾಹದಿಂದ ಮಾತ್ರ ಶಾಲೆ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ 1ನೇ ತರಗತಿಯಿಂದ ಆಂಗ್ಲಮಾಧ್ಯಮವನ್ನು ಮುಂದುವರೆಸಲು ಬೇಕಾದ ಅಗತ್ಯ ಕ್ರಮ, 4ರಿಂದ 5 ವರ್ಷದೊಳಗಿನ ಮಕ್ಕಳನ್ನು 1ನೇ ತರಗತಿಗೆ ಸೇರ್ಪಡೆ ಮಾಡುವ ಬಗ್ಗೆ ಚರ್ಚಿಸಲಾಯಿತು. ಶಾಲಾಭಿವೃದ್ಧಿ ಸಮಿತಿಗೆ ಎಸ್.ಪ್ರಕಾಶ್ ಮತ್ತು ರಾಜೇಶ್ವರಿ ಅವರನ್ನು ನಾಮ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪೌಲಿನಾ ಸಿಕ್ವೇರಾ, ಟಿಜಿಟಿ ಶಿಕ್ಷಕ ರಮೇಶ್, ಎಜಿಟಿ ಶಿಕ್ಷಕಿ ಆಶಾಲತ, ಶಿಕ್ಷಕಿ ಕೆ.ಟಿ. ಚಂದ್ರಕಲಾ ಉಪಸ್ಥಿತರಿದ್ದರು.ವೀರಾಜಪೇಟೆ: ಕಾವೇರಿ ಪದವಿ ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿ ವಿನೋದ್ ಹಾಗೂ ದ್ವಿತೀಯ ಬಿ.ಎ. ವಿದ್ಯಾರ್ಥಿ ರಿತೇಶ್ ತಂಡ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಜಿಲ್ಲಾಮಟ್ಟದ ರಸಪ್ರಶ್ನೆ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ನಾಪೆÇೀಕ್ಲು, ಸೆ. 16: ಪೆರಾಜೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಕಕ್ಕಬೆಯ ಕೆ.ಸಿ.ಎಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
200 ಮೀ ಓಟದಲ್ಲಿ ತನುಷ್ ಪಿ.ಯು. ಪ್ರಥಮ, 400 ಮೀ. ನಲ್ಲಿ ಜಂಶೀರ್ ಎಂ.ಹೆಚ್. ಪ್ರಥಮ ಹಾಗೂ ರಿಲೆಯಲ್ಲಿ ಶರಣ್ ಮುತ್ತಣ್ಣ ಮತ್ತು ತೀರ್ಥಪ್ರಸಾದ್ ದ್ವಿತೀಯ ಸ್ಥಾನಪಡೆದುಕೊಂಡಿದ್ದಾರೆ.
ಶ್ರೀಮಂಗಲ: ಪೆÇನ್ನಂಪೇಟೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಾರ್ಷಿಕ ಮಹಾಸಭೆ ಮತ್ತು ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮ ಪೆÇನ್ನಂಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪೆÇನ್ನಂಪೇಟೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ಗಿಡಕ್ಕೆ ನೀರು ಹಾಕುವದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಜಿಮ್ಮಿ ಸಿಕ್ವೆರ ಮಾತನಾಡಿ, ಸ್ಕೌಟ್ಸ್-ಗೈಡ್ಸ್ ಸಂಸ್ಥೆಯು ಒಂದು ಸ್ವಯಂ ಸೇವಕ ಸಂಸ್ಥೆ, ಇದರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಕ್ಕಳಿಗೆ, ವೈದ್ಯಕೀಯ, ಇಂಜಿನಿಯರಿಂಗ್, ರೈಲ್ವೆಗಳಲ್ಲಿ ಮೀಸಲಾತಿ ಇರುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಯೋಜನೆಯನ್ನು ವಿವರಿಸಿದರು. ಗೀತಗಾಯನ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕಾಪ್ಸ್ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಸ್ಕೌಟ್ಸ್ ವಿಭಾಗದಲ್ಲಿ ಅರುವತ್ತೊಕ್ಲು ಸರ್ವದೈವತಾ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ಪೆÇನ್ನಂಪೇಟೆ ಸಿ.ಆರ್.ಪಿ. ಟಿ.ಬಿ. ಜೀವನ್, ಕರ್ನಾಟಕ ಪಬ್ಲಿಕ್ ಶಾಲಾ ಮುಖ್ಯ ಶಿಕ್ಷಕ ವಿಜಯ, ಹೊದೂರು ಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಖಜಾಂಚಿ ಮುತ್ತಮ್ಮ, ಅಲ್ಲದೆ ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಾಪಕರು ಭಾಗವಹಿಸಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ ವಾಮನ ಕಾರ್ಯಕ್ರಮ ನಿರೂಪಿಸಿದರು.
ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಕಾಲೇಜಿನ ಎನ್‍ಸಿಸಿ ಘಟಕದ ವತಿಯಿಂದ ಕಾಲೇಜಿನ ಹಿಂಭಾಗದಲ್ಲಿರುವ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಸೇರಿದ ಜಾಗದಲ್ಲಿ ಶನಿವಾರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ಎನ್‍ಸಿಸಿ ಘಟಕದ 20ಕ್ಕೂ ಅಧಿಕ ಕೆಡೆಟ್‍ಗಳು ಸ್ವಚ್ಛತಾ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಾ ಪಾರ್ವತಿ ಅಪ್ಪಯ್ಯ, ಉಪಾಧ್ಯಕ್ಷ ಚರ್ಮಣ್ಣ, ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ, ನಿರ್ದೇಶಕರಾದ ಕಿಶೋರ್ ರೈ ಕತ್ತಲೆಕಾಡು, ವಿಘ್ನೇಶ್ ಎಂ. ಭೂತನಕಾಡು, ಎನ್‍ಸಿಸಿ ಘಟಕದ ಅಧಿಕಾರಿ ಮೇಜರ್ ಡಾ. ರಾಘವ್ ಪಾಲ್ಗೊಂಡಿದ್ದರು.ಸುಂಟಿಕೊಪ್ಪ: ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತದಾರ ಪಟ್ಟಿಯಲ್ಲಿ ಹೆಸರು ನೋಂದಾವಣೆಗೊಳಿಸುವ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ ನಡೆಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತ ಮತದಾನ ಮಹತ್ವದ ಬಗ್ಗೆ ಜಾಗೃತಿ ಜಾಥಾ ನಡೆಸಿದರು. ನಂತರ ಕಾಲೇಜಿನ ಆವರಣದಲ್ಲಿ ಆಯೋಜಿಸಲಾದ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ಮಾಡುವದು ನಮಗೆ ಕೊಟ್ಟಿರುವ ಒಂದು ಪವಿತ್ರ ಹಕ್ಕಾಗಿದೆ. ಪ್ರಜಾಪ್ರಭುತ್ವದ ಉಳಿವು ದೇಶದಲ್ಲಿನ ಪ್ರಜೆಗಳು ಮತದಾನದ ಬಗ್ಗೆ ಹೊಂದಿರುವ ಅರಿವಿನ ಮೇಲೆ ಅವಲಂಬಿಸಿದೆ. ಪ್ರತಿ ಚುನಾವಣೆಯಲ್ಲಿ ನಾವು ಮಾಡುವ ಮತದಾನದ ಶೇಕಡ ಅಂಕಿ ಅಂಶ ನಿರೀಕ್ಷಿತ ಮಟ್ಟದಲ್ಲಿ ಕಂಡು ಬರುತ್ತಿಲ್ಲ, ಮತದಾನದ ಅರಿವು ನಾಗರಿಕರಲ್ಲಿ ಇಲ್ಲದಿರುವದು ಈ ರೀತಿಯ ಸನ್ನಿವೇಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಮತದಾನದ ಮಹತ್ವ ತಿಳಿದು ಕೊಳ್ಳಬೇಕು. 18 ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಈ ಸಂಬಂಧ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ಎಸ್.ಹೆಚ್. ಈಶ, ಬಿ.ಎಂ. ಬೆಳ್ಯಪ್ಪ, ಪಿ. ಸೋಮಚಂದ್ರ, ಫಿಲಿಪ್ ವಾಸ್, ಮಂಜುಳಾ, ಜಯಶ್ರೀ, ಕೆ.ಸಿ. ಕವಿತಾ, ಪದ್ಮಾವತಿ, ಕವಿತಾ ಭಕ್ತ್, ಸುಕನ್ಯಾ ಮಂಜುಳ ಕಾವ್ಯ, ಕನಕ, ವಿದ್ಯಾರ್ಥಿಗಳು ಹಾಜರಿದ್ದರು.
ಗೋಣಿಕೊಪ್ಪಲು: ಇಲ್ಲಿನ ಕೂರ್ಗ್ ಪದವಿಪೂರ್ವ ಕಾಲೇಜಿನ (ಕಾಪ್ಸ್) ವಿದ್ಯಾರ್ಥಿಗಳು ಮತದಾರರ ಪರಿಶೀಲನಾ ಕಾರ್ಯಕ್ರಮದ ಜಾಗೃತಿ ಜಾಥಾವನ್ನು ಗೋಣಿಕೊಪ್ಪದಲ್ಲಿ ಹಮ್ಮಿಕೊಂಡಿದ್ದರು.
ವಿದ್ಯಾರ್ಥಿಗಳು ಮತದಾರರ ಪರೀಶೀಲನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನಂತರ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ಬೇಟಿ ನೀಡಿ ಪಂಚಾಯಿತಿ ಪದಾಧಿಕಾರಿಗಳಿಗೆ ಅರಿವು ಮೂಡಿಸಿ, ಜಾಗೃತಿಯ ಬಗ್ಗೆ ಘೋಷ ವಾಕ್ಯಗಳಿರುವ ಪ್ಲೇಕಾರ್ಡ್ ಅನ್ನು ಹಸ್ತಾಂತರಿಸಿದರು.
ನಂತರ ಗೋಣಿಕೊಪ್ಪದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಜಾಗೃತಿಯ ಬಗ್ಗೆ ಅರಿವು ಮೂಡಿಸಲು ಭಿತ್ತಿ ಪತ್ರಗಳನ್ನು ಹಂಚಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಗಣಪತಿ, ಪ್ರಕಾಶ್ ಮತ್ತು ಇತರ ಸದಸ್ಯರುಗಳು ಹಾಗೂ ಕೂರ್ಗ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ಮತದಾರ ಸಾಕ್ಷರತಾ ಸಂಘದ ಪದಾಧಿಕಾರಿ ಬೆಳ್ಳಿಯಪ್ಪ, ಉಪನ್ಯಾಸಕಿ ಪವಿತ್ರ, ರಾಜೇಶ್, ಶಾಲ್ ಹಾಗೂ ಭೋದಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಬೀಜದುಂಡೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಮುಳಿಯ ಶಾಖೆಯ ಸುಂದರೇಶ್, ಪ್ರಜ್ವಲ್ ಮುಂತಾದವರು ಬೀಜದುಂಡೆ ಮಾಡುವ ಬಗ್ಗೆ ಮಾಹಿತಿ ನೀಡಿದರು. ಕಾವೇರಿ ಕಾಲೇಜು ಎನ್.ಎಸ್.ಎಸ್. ಅಧಿಕಾರಿಗಳಾದ ವನಿತ್ ಕುಮಾರ್, ರೀತಾ ಎನ್.ಪಿ., ತಿರುಮಲ್ಲಯ್ಯ ಮುಂತಾದ ನಾಯಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ನಾಯಕರಾದ ಪ್ರತಾಪ್, ದೇಚಮ್ಮ, ಭವನ್ ಕುಮಾರ್, ದೇವಯ್ಯ, ಕಾರ್ತಿಕ್, ಭುವನಾ ಇವರ ಮಾರ್ಗದಲ್ಲಿ ವಿದ್ಯಾರ್ಥಿಗಳು ಸುಮಾರು 7500ಕ್ಕೂ ಹೆಚ್ಚು ಬೀಜದುಂಡೆ ಮಾಡಿದರು. ಇದನ್ನು ತಿತಿಮತಿಯಲ್ಲಿ ಬೆಂಕಿ ಬಿದ್ದು ಸುಟ್ಟು ಹೋಗಿದ್ದ ಅರಣ್ಯ ಪ್ರದೇಶ ಮತ್ತು ಪ್ರಕೃತಿ ವಿಕೋಪವಾದ ಸ್ಥಳದಲ್ಲಿ ಬಿತ್ತನೆ ಮಾಡಲಾಗುವದು.
ಪೊನ್ನಂಪೇಟೆ: ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ಕಟ್ಟಡದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಭೆಯಲ್ಲಿ 2019-22ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಕೆ.ಕೆ. ಬೋಪಣ್ಣ, ಉಪಾಧ್ಯಕ್ಷರಾಗಿ ಸುನಿಲ್‍ಕುಮಾರ್, ಕಾರ್ಯದರ್ಶಿಯಾಗಿ ಸುಮಾ ಜಿ.ಆರ್, ಖಜಾಂಚಿಯಾಗಿ ಮೋಹನ್ ರಾಜ್.ವಿ.ಎಲ್., ಸಹ ಕಾರ್ಯದರ್ಶಿಯಾಗಿ ರವಿ ಕುಮಾರ್ ಜಿ.ಆರ್., ನಿರ್ದೇಶಕರುಗಳಾಗಿ ಜಯಪ್ರಕಾಶ್ ಪಿ, ದಿಲನ್ ಐ.ಎಂ, ಲೋಕೇಶ್ ಪಿ.ಎ, ವಿನೋದ್, ಸುಮಿತ್ರ ಜಿ.ಅರ್., ಕರ್ಣ ಕೆ.ಎನ್, ಪೂಜಿತ ಪಿ.ಎಲ್, ಅಶ್ವತ್ ಅರ್, ದರ್ಶನ್‍ಕುಮಾರ್ ಹಾಗೂ ಸಂಚಾಲಕರಾಗಿ ವನಿತ್ ಕುಮಾರ್ ಎಂ.ಎನ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಹಲವು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಬೆಂಬಲವನ್ನು ಸೂಚಿಸಿದರು. ನೂತನ ಅಧ್ಯಕ್ಷ ಕೀತಿಯಂಡ ಬೋಪಣ್ಣ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳಿಂದ ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು. ಬಹುತೇಕ ಬಡ ವಿದ್ಯಾರ್ಥಿಗಳೇ ಓದುವ ಈ ಕಾಲೇಜಿಗೆ ಆರ್ಥಿಕ ಕ್ರೋಢೀಕರಣ ಮಾಡಿ ವಿವಿಧ ಕಾಮಗಾರಿ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಚುನಾವಣಾ ಅಧಿಕಾರಿಯಾಗಿ ಪಾಲ್ಗೊಂಡಿದ್ದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ವನಿತ್‍ಕುಮಾರ್ ಎಂ.ಎನ್ ಯಾವದೇ ಗೊಂದಲವಿಲ್ಲದಂತೆ ಚುನಾವಣೆ ನಡೆಸಿಕೊಟ್ಟರು.