ಸುಂಟಿಕೊಪ್ಪ, ಸೆ. 17: ಸರ್ಕಾರಿ ಪ್ರೌಢಶಾಲೆಯ ಕಟ್ಟಡದಲ್ಲಿ ಕಳೆದ ಹಲವು ದಿನಗಳಿಂದ ಕಂಬಳಿ ಹುಳಗಳು ಕಂಡುಬಂದಿದ್ದು, ಆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ಔಷಧಿ ಸಿಂಪಡಿಸಿದರು.
ನಿರಂತರವಾಗಿ ಮಳೆ, ಗಾಳಿ ಬೀಳುತ್ತಿರುವ ಹಿನ್ನೆಲೆ ಕಳೆದ ಹಲವು ದಿನಗಳಿಂದ ಶಾಲೆಯ ಕೊಠಡಿ ಸೇರಿದಂತೆ ಕಟ್ಟಡದ ಸುತ್ತಮುತ್ತ ಕಂಬಳಿ ಹುಳಗಳ ಹಾವಳಿ ಹೆಚ್ಚಾಗಿತ್ತು. ಇದರಿಂದ ಹೆದರಿದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಮತ್ತು ಪಿಡಿಓ ವೇಣುಗೋಪಾಲ್ ಅವರಲ್ಲಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಶಾಲೆಯ ವಾತಾವರಣ ಸುತ್ತಲೂ ಔಷಧಿ ಸಿಂಪಡಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶಮಾಡಿಕೊಟ್ಟರು.