ಮಡಿಕೇರಿ, ಸೆ. 17: ದೇಶದ ಹೆಸರಾಂತ ಮುಸ್ಲಿಂ ವಿದ್ಯಾಸಂಸ್ಥೆ ಕೇರಳದ ಕೋಯಿಕೋಡ್ ಮರ್ಕಸುಸ್ಸಖಾಫತಿ ಸುನ್ನಿಯ್ಯಾದಿಂದ ಸಖಾಫಿ ಪದವಿ ಪಡೆದಿರುವ ವಿದ್ವಾಂಸರ ಕೊಡಗು ಜಿಲ್ಲಾ ಒಕ್ಕೂಟವಾದ ಕೊಡಗು ಸಖಾಫೀಸ್ ಕೌನ್ಸಿಲ್ ಇದರ ನೂತನ ಅಧ್ಯಕ್ಷರಾಗಿ ಸೆಯ್ಯದ್ ಖಾತಿಂ ಸಖಾಫಿ ಎಮ್ಮೆಮಾಡು ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ, ಹಾರಿಸ್ ಸಖಾಫಿ ನೆಲ್ಲಿಹುದಿಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ಮುಹಮ್ಮದ್ ನಿಝಾರ್ ಸಖಾಫಿ ಕಡಂಗ, ಸಹಕಾರ್ಯದರ್ಶಿಗಳಾಗಿ ಅಸ್ಕರ್ ಸಖಾಫಿ ಕೊಟ್ಟಮುಡಿ, ಸಲೀಂ ಸಖಾಫಿ ಕೊಂಡಗೇರಿ, ಕೋಶಾಧಿಕಾರಿಯಾಗಿ ಮುಸ್ತಫಾ ಸಖಾಫಿ ಗರಗಂದೂರು ಆಯ್ಕೆಗೊಂಡಿದ್ದಾರೆ.

ನಝೀರ್ ಸಖಾಫಿ, ಹಸೈನಾರ್ ಕಾಮಿಲ್ ಸಖಾಫಿ, ಶಬೀರ್ ಸಖಾಫಿ, ಖಮರುದ್ದೀನ್ ಸಖಾಫಿ ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 177 ಸಖಾಫಿ ಪದವೀಧರರಿದ್ದು, ಆ ಪೈಕಿ ಆರು ಮಂದಿ ಮಹಮ್ಮದ್ ಪೈಗಂಬರ್ ಅವರ ಕುಟುಂಬ ಪರಂಪರೆಗೆ ಸೇರಿದವರಾಗಿದ್ದು, ಐದು ಮಂದಿ ಪವಿತ್ರ ಖುರಾನ್ ಕಂಠಪಾಟ ಮಾಡಿದವರಾಗಿದ್ದಾರೆ. 35 ಮಂದಿ ವಿವಿಧ ಮಸೀದಿಗಳಲ್ಲಿ ಮುದರ್ರಿಸರಾಗಿದ್ದಾರೆ. 30 ಮಂದಿ ವಿದೇಶಗಳಲ್ಲಿ ಉದ್ಯೋಗ ಹೊಂದಿದ್ದು, ಒಬ್ಬರು ಧರ್ಮ ಗುರುಗಳಾಗಿದ್ದುಕೊಂಡೇ ಕಾನೂನು ವ್ಯಾಸಂಗವನ್ನು ಮಾಡುತ್ತಿದ್ದಾರೆ. ಓರ್ವ ಸಖಾಫಿ ಪದವೀಧರ ಪೊಲೀಸ್ ಅಧಿಕಾರಿಯಾಗಿರುವದು ವಿಶೇಷವೆನಿಸಿದೆ.