ಮಡಿಕೇರಿ, ಸೆ. 17: ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾಧ್ಯಕ್ಷ ರನ್ನು ಬದಲಾವಣೆ ಮಾಡಬೇಕೆಂದು ಪಕ್ಷದ ಮುಖಂಡರೋರ್ವರ ವಿಚಾರದಿಂದಾಗಿ ವರಿಷ್ಠರ ಸಮಕ್ಷಮ ಏರ್ಪಡಿಸಲಾಗಿದ್ದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಗೊಂದಲ ಉಂಟಾಗಿ ಸಭೆಯನ್ನೇ ಮುಂದೂಡಿದ ಪ್ರಸಂಗ ನಡೆದಿದೆ.

ಜಾತ್ಯತೀತ ಜನತಾದಳದ ಕೊಡಗು ಜಿಲ್ಲಾ ಘಟಕ ಪದಾಧಿಕಾರಿಗಳ ಸಭೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶೇಷಾದ್ರಿಪುರದ ಜೆ.ಪಿ. ಭವನದಲ್ಲಿ ನಿನ್ನೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಸೇರಿದಂತೆ ಮುಖಂಡರಾದ ಬಿ.ಎ. ಜೀವಿಜಯ, ಪಕ್ಷದ ಪದಾಧಿಕಾರಿ ಗಳು, ಚುನಾಯಿತ ಪ್ರತಿನಿಧಿಗ ಳೊಂದಿಗೆ ಜೀವಿಜಯ ಅವರ ಬೆಂಬಲಿಗರು ಪಾಲ್ಗೊಂಡಿದ್ದರೆ ನ್ನಲಾಗಿದೆ.

ಸಭೆ ಆರಂಭವಾಗುತ್ತಿದ್ದಂತೆ ವೇದಿಕೆಯಲ್ಲಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲ ಖಾನ್ ಅವರು, ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ನಂತರ ಜಿಲ್ಲಾ ಪದಾಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸುವಂತೆ ಖಾನ್ ಅವರು ಗಣೇಶ್ ಅವರಿಗೆ ಸೂಚಿಸಿದರೆನ್ನ ಲಾಗಿದೆ. ಗಣೇಶ್ ಅವರು ಪದಾಧಿಕಾರಿಗಳೊಂದಿಗೆ ಜೀವಿಜಯ ಅವರನ್ನು ವೇದಿಕೆಗೆ ಆಹ್ವಾನಿಸಿದ್ದಾರೆ.

ಆದರೆ, ವೇದಿಕೆ ಏರಲು ನಿರಾಕರಿಸಿದ ಜೀವಿಜಯ ಅವರು, ಗಣೇಶ್ ಅವರು ಅಡಗೂರು ವಿಶ್ವನಾಥ್ ಅವರ ಶಿಷ್ಯರಾಗಿದ್ದು, ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು, ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು, ಹಾಗಾದರೆ ಮಾತ್ರ ವೇದಿಕೆ ಏರುವದಾಗಿ ಹೇಳಿದ್ದಾರೆ. ಈ ಸಂದರ್ಭ ಪ್ರತಿಕ್ರಿಯಿಸಿದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು, ಇದು ಜಿಲ್ಲಾ ಪದಾಧಿಕಾರಿಗಳ ಸಭೆ, ಜಿಲ್ಲಾಧ್ಯಕ್ಷರನ್ನು ಕೆಳಗಿಳಿಸಲು ಆಗುವದಿಲ್ಲ, ಬೇಕಾದರೆ ನಾನೇ ಕೆಳಗಿಳಿಯುತ್ತೇನೆ, ಅವರನ್ನು ಕೆಳಗಿಸಿದರೆ, ಅವಮಾನ ಮಾಡಿದಂತಾ ಗುತ್ತದೆ ಎಂದು ಉತ್ತರಿಸಿದ್ದಾರೆ.

ಬಳಿಕ ವೇದಿಕೆಯೇರಿದ ಜೀವಿಜಯ ಅವರು, ಗಣೇಶ್ ಅವರು ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ; ತಾನೂ ಹಿಂದಿನಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದು, ನನ್ನ ಮಾತು ಕೇಳಬೇಕೆಂದು, ಅಧ್ಯಕ್ಷರನ್ನು ಬದಲಾಯಿಸಿ ಪಕ್ಷದವರನ್ನು ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.

ಮತ್ತೆ ಮಾತನಾಡಿದ ದೇವೇಗೌಡರು, ಗಣೇಶ್ ಯಾರೆಂದು ನನಗೂ ಗೊತ್ತಿಲ್ಲ; ವಿಶ್ವನಾಥ್ ಅವರು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇಲ್ಲಿ ಬದಲಾವಣೆ ವಿಚಾರ ಬರಬಾರದು, ಈ ಬಗ್ಗೆ ಕೊಡಗು ಜಿಲ್ಲೆಗೆ ಆಗಮಿಸಿ, ಅಲ್ಲಿ ಮಾತನಾಡುವದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಗಣೇಶ್ ಅವರು, ಅಧ್ಯಕ್ಷನಾಗಿ ಆಯ್ಕೆಯಾದ 8 ತಿಂಗಳಿನಿಂದ ಜೀವಿಜಯ ಅವರು ತನ್ನ ತೇಜೋವಧೆ ಮಾಡುತ್ತಾ ಬರುತ್ತಿ ದ್ದಾರೆ. ಅನ್ಯಾಯ ಮಾಡುತ್ತಿದ್ದಾರೆ ತಾನು ವಿಶ್ವನಾಥ್ ಅವರ ಶಿಷ್ಯನಾದರೂ ಪಕ್ಷ ಬಿಟ್ಟು ಹೋಗಿಲ್ಲ, ಪಕ್ಷದಲ್ಲಿಯೆ ಇದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಅಲ್ಲದೆ, ಜೀವಿಜಯ ಅವರು ಯಾರೇ ಅಧ್ಯಕ್ಷರಾಗಲಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವದಿಲ್ಲ. ಇಂದಿನ ಸಭೆಯಲ್ಲಿ ಯಾರೊಬ್ಬರೂ ಮಾಜಿ ಅಧ್ಯಕ್ಷರುಗಳಲ್ಲಿ; 20 ವರ್ಷದಿಂದ ಒಂದು ಸ್ಥಾನ ಗೆಲ್ಲಿಸಲು ಆಗಿಲ್ಲವೆಂದು ಹೇಳಿದ್ದಾರೆ.

ಇದನ್ನೆಲ್ಲ ಗಮನಿಸಿದ ದೇವೇಗೌಡರು ಈ ಬಗ್ಗೆ ಕೊಡಗು ಜಿಲ್ಲೆಗೆ ಬಂದು ಮಾತನಾಡುತ್ತೇನೆ ಎಂದು ಹೇಳಿ ಸಭೆಯನ್ನು ಮುಂದೂಡಿ ಹೊರ ನಡೆದರು ಎನ್ನಲಾಗಿದೆ.