ಒಡೆಯನಪುರ, ಸೆ. 17: ದುಂಡಳ್ಳಿ ಗ್ರಾ.ಪಂ.ಯಲ್ಲಿ ಕಳೆದ 25 ವರ್ಷಗಳ ಹಿಂದೆ ಗ್ರಾ.ಪಂ. ಕಚೇರಿಯಲ್ಲಿ ಅಟೆಂಡರ್ ಆಗಿ ಕರ್ತವ್ಯಕ್ಕೆ ಸೇರಿದ ಬಳಿಕ ಬಿಲ್‍ಕಲೆಕ್ಟರ್ ಆಗಿ ಬಡ್ತಿ ಹೊಂದಿ ಇದೀಗ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿ ವೀರಾಜಪೇಟೆ ತಾಲೂಕಿನ ಬೇಟ್ಟೋಳ್ಳಿ ಗ್ರಾ.ಪಂ.ಗೆ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ದೇವರಾಜ್ ಅವರಿಗೆ ಗ್ರಾ.ಪಂ. ವತಿಯಿಂದ ಬೀಳ್ಕೊಡಲಾಯಿತು. ದುಂಡಳ್ಳಿ ಗ್ರಾ.ಪಂ.ಯ ಭಾರತ್ ನಿರ್ಮಾಣ್ ರಾಜೀವ್‍ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವರ್ಗಾವಣೆಗೊಂಡ ಕಾರ್ಯದರ್ಶಿ ದೇವರಾಜ್ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಈ ಸಂದರ್ಭ ಭಾರತ್ ನಿರ್ಮಾಣ್ ರಾಜೀವ್‍ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣ ಗುತ್ತಿಗೆದಾರ ಅಬ್ದುಲ್ಲ ಮೇಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭದಲ್ಲಿ ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ತಾ.ಪಂ. ಸಿ.ಇ.ಓ. ಸುನಿಲ್‍ಕುಮಾರ್, ಜಿ.ಪಂ. ಮುಖ್ಯ ಅಭಿಯಂತರ ವೀರೇಂದ್ರ, ಗ್ರಾ.ಪಂ. ಪಿಡಿಓ ಸುಮೇಶ್, ಕಾರ್ಯದರ್ಶಿ ವೇಣುಗೋಪಾಲ್ ಗ್ರಾ.ಪಂ. ಸದಸ್ಯರು ಹಾಜರಿದ್ದರು.