ಮಡಿಕೇರಿ, ಸೆ. 17: ಮಂಗಳೂರಿನ ನಿಟ್ಟೆ ಗುಲಾಬಿಶೆಟ್ಟಿ ಮೆಮೋರಿಯಲ್ ಇನ್ಸ್‍ಟಿಟ್ಯೂಟ್ ಆಫ್ ಫಾರ್ಮಕ್ಯೂಟಿಕಲ್ ಸೈನ್ಸ್ ಯೂನಿರ್ವಸಿಟಿಯಲ್ಲಿ ಜಿಲ್ಲೆಯ ಶರ್ಮಿಳಾ ತಶ್ವತ್ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಡಾ. ರೊನಾಲ್ಡ್ ಫರ್ನಾಂಡಿಸ್, ಡಾ. ಸತೀಶ್ ಕುಮಾರ್ ಭಂಡಾರಿ, ಡಾ. ಸುಚೇತಕುಮಾರಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಂ sಣuಜಥಿ oಟಿ Immuಟಿosಣimuಟಚಿಣoಡಿಥಿ ಠಿoಣeಟಿಣiಚಿಟ oಜಿ ಂsಠಿಚಿಡಿಚಿgus ಖeಛಿemosus ಖooಣ ಇxಣಡಿಚಿಛಿಣ ಚಿಟಿಜ Isoಠಿಡಿiಟಿosiಟಿe ಂgಚಿiಟಿsಣ Ioಟಿisiಟಿg Immuಟಿosuಠಿಠಿಡಿessioಟಿ’ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿಹೆಚ್‍ಡಿ ಪದವಿ ಲಭಿಸಿದೆ.
ಕುಂಜಿಲಗೇರಿ ಗ್ರಾಮದ ಕಾಮೆಯಂಡ ಪೂಣಚ್ಚ, ಸರೋಜ ಪೂಣಚ್ಚ ಅವರ ಪುತ್ರಿಯಾಗಿರುವ ಶರ್ಮಿಳಾ ಅವರು ಕಡಂಗ ಗ್ರಾಮದ ಅನ್ನಂಬಿರ ನಾಣಯ್ಯ ಹಾಗೂ ಇಂದಿರಾ ಅವರ ಪುತ್ರ ತಶ್ವತ್ ಅವರನ್ನು ವಿವಾಹವಾಗಿದ್ದು, ಪ್ರಸ್ತುತ ಮಂಗಳೂರಿನ ನಿಟ್ಟೆಯಲ್ಲಿ ಕೆ.ಎಸ್. ಹೆಗಡೆ ವೈದ್ಯಕೀಯ ಕಾಲೇಜಿನಲ್ಲಿ ಸಂಶೋಧಕಿಯಾಗಿದ್ದಾರೆ.