ಸೋಮವಾರಪೇಟೆ, ಸೆ. 17: ಬೆಂಗಳೂರು ಮಲೆನಾಡು ಗೆಳೆಯರ ಸಂಘದ ವತಿಯಿಂದ 9ನೇ ವರ್ಷದ ವಾರ್ಷಿಕೋತ್ಸವ ಮತ್ತು ಮಲೆನಾಡು ಹಬ್ಬದ ಪ್ರಯುಕ್ತ ಬೆಂಗಳೂರಿನ ಹೆಚ್.ಎಂ.ಟಿ. ಮೈದಾನದಲ್ಲಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ತಾಲೂಕಿನ ಕಿರಗಂದೂರು ಸ್ಪೋಟ್ರ್ಸ್ ಕ್ಲಬ್ ತಂಡ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‍ನಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.

ಡಬಲ್ಸ್‍ನಲ್ಲಿ ಒದ್ದಳ್ಳಿ ನಿತಿನ್ ಹಾಗೂ ಕೆ.ಜಿ. ನಿತಿನ್, ಮಿಶ್ರ ಡಬಲ್ಸ್‍ನಲ್ಲಿ ನಿತಿನ್ ಹಾಗೂ ಸುಪ್ರೀತ ಆಟವಾಡಿದರು. ಇದೇ ಸಂದರ್ಭ ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಸೋಮವಾರಪೇಟೆಯ ಹಾನಗಲ್ಲು ರಂಜಿತಾ, ಉದ್ಯಮಿ ಕೆ.ಜಿ. ಆದರ್ಶ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚನ್ನೇಗೌಡ, ದಾಸರಹಳ್ಳಿ ಶಾಸಕ ಆರ್. ಮಂಜುನಾಥ್, ಕ್ರೀಡಾ ಕಾರ್ಯದರ್ಶಿ ರಂಜನ್‍ಗೌಡ ಇದ್ದರು.