ಕೂಡಿಗೆ, ಸೆ. 16 : ಭಾರತ ಚುನಾವಣಾ ಆಯೋಗದ ಆದೇಶದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕೊಡಗು ಜಿಲ್ಲೆಯ ನಿರ್ದೇಶನದಂತೆ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಮತದಾರರ ಪಟ್ಟಿ ಪರಿಶೀಲನಾ ಆಂದೋಲನವನ್ನು ಪ್ರಾಂಶುಪಾಲರಾದ ಹಂಡ್ರಂಗಿ ನಾಗರಾಜ್ ಘೋಷಣೆ ಕೂಗುವುದರ ಮೂಲಕ ಪ್ರಭಾತ್ ಪೇರಿಯನ್ನು ಉದ್ಘಾಟಿಸಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸೋಮಯ್ಯ ಪ್ರಭಾತ್ ಪೇರಿಯ ಉದ್ದೇಶವನ್ನು ಮನವರಿಕೆ ಮಾಡಿ ಕೊಟ್ಟರು. ಮತದಾರರ ಸಾಕ್ಷರತಾ ಕ್ಲಬ್‍ನ ಕಾರ್ಯದರ್ಶಿಯಾದ ಎಚ್. ಆರ್. ಶಿವಕುಮಾರ್ ವಿದ್ಯಾರ್ಥಿಗಳಿಗೆ ಜಾಥಾದ ಮಾರ್ಗದ ಸೂಚನೆ ನೀಡಿದರು. ತದನಂತರ ವಿದ್ಯಾರ್ಥಿ ಗಳು ಬಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಶಿರಂಗಾಲ ಗ್ರಾಮದ ಮುಖ್ಯ ರಸ್ತೆ ಗಳಲ್ಲಿ ಸುಮಾರು ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜಾಥಾದ ಮೂಲಕ ಸಾಗಿದರು.
ಶಿರಂಗಾಲದ ಮುಖ್ಯವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ಮತದಾರರ ಸಾಕ್ಷರತದ ಬಗ್ಗೆ ಜಾಗೃತಿ ಮೂಡಿದರು. ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಮಾತನಾಡಿ ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭವಾಗಿದ್ದು, ಅಕ್ಟೊಬರ್ ಹದಿನೈದು ರವರೆಗೆ ಪರಿಶೀಲನೆಗೆ ಅವಕಾಶವಿದ್ದು ತಮ್ಮ ಹೆಸರು ಜನ್ಮ ದಿನಾಂಕ ವಯಸ್ಸು ಭಾವಚಿತ್ರ ಇತ್ಯಾದಿಗಳಲ್ಲಿ ಯಾವುದೇ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳು ವಂತೆ ಭಾರತ ಚುನಾವಣಾ ಆಯೋಗ ತಿಳಿಸಿದೆ ಎಂದು ವಿವರಿಸಿ ದರು. ಆಂದೋಲನದಲ್ಲಿ ಕಾಲೇಜಿನ ಉಪನ್ಯಾಸಕರು ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.