ಶನಿವಾರಸಂತೆ, ಸೆ. 17: ಅಪ್ರಾಪ್ತ ಬಾಲಕನೋರ್ವ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಮಡಿಕೇರಿ ಬಾಲನ್ಯಾಯ ಮಂಡಳಿ ಅಪ್ರಾಪ್ತ ಬಾಲಕನಿಗೆ ರೂ. 4 ಸಾವಿರ ದಂಡ ವಿಧಿಸಿದೆ. ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಅಪ್ರಾಪ್ತ ಬಾಲಕನೋರ್ವ ಚಾಲನ ಪರವಾನಗಿ ಇಲ್ಲದೆ ಹಾಗೂ ನೋಂದಾವಣೆಯಾಗದ ಬೈಕನ್ನು ಚಾಲನೆ ಮಾಡುತ್ತಿದ್ದಾಗ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಪತ್ತೆ ಹಚ್ಚಿ ಮಡಿಕೇರಿ ಬಾಲನ್ಯಾಯ ಮಂಡಳಿಗೆ ಆರೋಪ ಪಟ್ಟಿ ಸಲ್ಲಿಸಿದ ಮೇರೆ ನ್ಯಾಯಾಲಯ ಬಾಲಕನಿಗೆ ರೂ. 4 ಸಾವಿರ ದಂಡ ವಿಧಿಸಿದೆ.