ಶ್ರೀಮಂಗಲ, ಸೆ. 16: ವಿಯೆಟ್ನಾಂ ದೇಶದಿಂದ ಅಕ್ರಮವಾಗಿ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿರುವದರಿಂದ ದೇಶೀಯ ಕಾಳುಮೆಣಸು ದರ ಶೇ.60ರಷ್ಟು ಕುಸಿತವಾಗಿದ್ದು, ಇದರಿಂದ ಇದನ್ನು ಬೆಳೆಯುವ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕಾಳುಮೆಣಸು ಆಮದನ್ನು ತಕ್ಷಣ ನಿಲ್ಲಿಸಿ, ಈ ಅಕ್ರಮ ಆಮದು ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ದೇಶೀಯ ಬೆಳೆಗಾರರ ರಕ್ಷಣೆಗೆ ಧಾವಿಸುವಂತೆ ಮನವಿ ಮಾಡಲು (ಮೊದಲ ಪುಟದಿಂದ) ಕೊಡಗು ಬೆಳೆಗಾರ ಒಕ್ಕೂಟ ಮತ್ತು ಜಿಲ್ಲಾ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ವತಿಯಿಂದ ನಡೆದ ಜಂಟಿ ಸಂಘಟನೆಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳÀಲಾಯಿತು. ಗೋಣಿಕೊಪ್ಪ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ತಾ.20 ರಂದು ಉಭಯ ಸಂಘಟನೆಯ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರ ಮೂಲಕ ಪ್ರಧಾನಿಯವರಿಗೆ ಕಾಳುಮೆಣಸು ಅಕ್ರಮ ಆಮದು ಹಾಗೂ ಅಕ್ರಮ ಆಮದಿನಿಂದ ಕೆಲವು ವರ್ತಕರು ಅಲ್ಪಾವಧಿಯಲ್ಲಿ ಗಳಿಸಿರುವ ಕೋಟ್ಯಂತರ ರೂ. ಬಗ್ಗೆ ಅಲ್ಲದೆ ವಿಯೆಟ್ನಾಂ ಕಾಳುಮೆಣಸಿನ ಕಳಪೆ ಗುಣಮಟ್ಟ ಸೇರಿದಂತೆ ಸಂಪೂರ್ಣ ದಾಖಲೆಯನ್ನು ಪತ್ರ ದೊಂದಿಗೆ ಕಳುಹಿಸಲು ನಿರ್ಧರಿಸ ಲಾಯಿತು.

ಅಕ್ರಮ ಕಾಳುಮೆಣಸು ಆಮದಿನಿಂದ ಕೆ.ಜಿ.ಗೆ ರೂ.730 ಇದ್ದ ದರ ಇದೀಗ ರೂ.330ಕ್ಕೆ ಕುಸಿದಿದೆ. ಪ್ರತಿ ಕೆ.ಜಿ. ಕಾಳುಮೆಣಸು ಬೆಳೆಯಲು ರೂ. 350 ವೆಚ್ಚ ತಗಲುತ್ತಿದ್ದು, ಕಾನೂನನ್ನು ಉಲ್ಲಂಘಿಸಿ ಆಮದುದಾರರು ಕಾಳುಮೆಣಸು ಭಾರತಕ್ಕೆ ತರುವದರಿಂದ ತೀವ್ರ ಬೆಲೆಕುಸಿತಕ್ಕೆ ಕಾರಣವಾಗಿರುವ ಸಂಪೂರ್ಣ ವಿವರದೊಂದಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ; ಸರಕಾರದ ಸಾಲಮನ್ನಾ ಯೋಜನೆಯಡಿ ತಾ. 10.7.2018ಕ್ಕೆ ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಅಧೀನದಲ್ಲಿ ಬರುವ ಸಹಕಾರ ಸಂಘದಲ್ಲಿ ಒಟ್ಟು 32903 ರೈತರಿಗೆ 48943.67 ಲಕ್ಷ ಹೊರಬಾಕಿ ಇದ್ದು, ಇದರಲ್ಲಿ ರೂ. ಒಂದು ಲಕ್ಷದವರೆಗೆ ಮನ್ನಾ ಆಗಲಿರುವ ಫಲಾನುಭವಿಗಳು 32903 ಆಗಿದ್ದು, ಇವರಿಗೆ 25481.91 ¯ಕ್ಷ ಸಾಲ ಸೌಲಭ್ಯಕ್ಕೆ ಒಳಪಟ್ಟಿದೆ. ಹಸಿರು ಪಟ್ಟಿ ಎಂದು ಸರಕಾರದ ಹಂತದಲ್ಲಿ ಈಗಾಗಲೇ ಪರಿಗಣಿಸ ಲಾಗಿರುವ ಫಲಾನುಭವಿಗಳ ಸಂಖ್ಯೆ 16673 ಆಗಿದ್ದು, ಇವರಿಗೆ 11671.16 ಲಕ್ಷ ಸಾಲವಿರುತ್ತದೆ ಎಂದು ವಿವರಿಸಿದರು.

ಸಾಲಮನ್ನಾ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೆಫ್ಟ್ ಮೂಲಕ ನೇರವಾಗಿ ರೈತರ ಖಾತೆಗೆ ಇದುವರೆಗೆ ಜಮೆಯಾಗಿರುವ ಫಲಾನುಭವಿಗಳ ಸಂಖ್ಯೆ 10421 ಆಗಿದ್ದು, ಇವರಿಗೆ 6845.86 (ಹಿಂದಿನ ಸರಕಾರದ ಅವಧಿಯಲ್ಲಿ) ಲಕ್ಷ ಪಾವತಿ ಆಗಿದೆ ಎಂದು ತಿಳಿಸಿದರು.

ತಾ. 13 ರಂದು ನೆಫ್ಟ್ ಮೂಲಕ 4257 ರೈತರ ಖಾತೆಗೆ 3264.32 ಲಕ್ಷ ಜಮೆ ಆಗಿದೆ. ಒಟ್ಟು ಈವರೆಗೆ 14678 ಫಲಾನುಭವಿ ರೈತರಿಗೆ 10110.18 ಲಕ್ಷ ಬಿಡುಗಡೆ ಆಗಿದೆ ಎಂದು ಅವರು ಮಾಹಿತಿ ನೀಡಿದರು. ನೆಫ್ಟ್ ಮೂಲಕ 1995 ರೈತರಿಗೆ ರೂ.1560.98 ಲಕ್ಷ ಬಿಡುಗಡೆಗೆ ಬಾಕಿಇದೆ. ಸರಕಾರದ ಹಂತದಲ್ಲಿ ಸಾಲಮನ್ನಾ ಆಗಲು ಬಾಕಿ ಇರುವ 16230 ಪ್ರಕರಣಗಳಿಗೆ 13810.80 ಲಕ್ಷ ಪಾವತಿ ಆಗಬೇಕಾಗಿದೆ. ಇದಲ್ಲದೆ ಸರಕಾರವು ಗ್ರೀನ್ ಲಿಸ್ಟ್ ಆಗಲು ಬಾಕಿ ಇರುವ 4510, ಆಧಾರ್, ರೇಷನ್ ಕಾರ್ಡ್, ಪಹಣಿ, ಸಾಲಗಾರ ಹೆಸರಿನೊಂದಿಗೆ ತಾಳೆ ಆಗದೆ ಪರಿಶೀಲನೆ ಹಂತದಲ್ಲಿರುವ 780 ಅಲ್ಲದೆ ರೈತರ ಸ್ವಯಂ ದೃಢೀಕರಣವನ್ನು ಆನ್‍ಲೈನ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಅಳವಡಿಸಲು ಬಾಕಿ ಇರುವ ಪ್ರಕರಣಗಳ ಸಂಖ್ಯೆ 379 ಆಗಿದೆ ಎಂದು ಬಾಂಡ್ ವಿವರಿಸಿದರು.

ಆರೋಗ್ಯ ವಿಮೆಗೆ ಮನವಿ:

ಸಹಕಾರ ಸಂಘದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆ ಯೋeನೆ ಮೂಲಕ ದೊರೆಯುತ್ತಿದ್ದ ಸೌಲಭ್ಯ ಸ್ಥಗಿತವಾಗಿದೆ. ಯಶಸ್ವಿನಿ ಬದಲಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಬಿ.ಪಿ.ಎಲ್ ಕಾರ್ಡ್‍ದಾರರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತಿದೆ. ಆದರೆ ಎ.ಪಿ.ಎಲ್. ಕಾರ್ಡ್‍ದಾರರಿಗೆ ಶೇ. 30 ರಷ್ಟು ಮಾತ್ರ ಪ್ರಯೋಜನವಾಗುತ್ತಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಎಲ್ಲಾ ಖಾಯಿಲೆಗಳಿಗೆ ಇದರ ಸೌಲಭ್ಯ ಇಲ್ಲದಿರುವದರಿಂದ ಡಿ.ಸಿ.ಸಿ.ಬ್ಯಾಂಕ್ ತನ್ನ ಅಧೀನದಲ್ಲಿ ಬರುವ ಎಲ್ಲ ಸಹಕಾರ ಸಂಘಗಳಲ್ಲಿ ಕೊಡಗು ಜಿಲ್ಲೆಗೆ ಅನ್ವಯವಾಗುವಂತೆ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತರುವಂತೆ ಮನವಿ ಮಾಡಿತು. ಇದರಲ್ಲಿ ಸಹಕಾರ ಸಂಘದ ಎಲ್ಲ ಸದಸ್ಯರು ಮತ್ತು ಅವರ ಕುಟುಂಬಕ್ಕೆ ಎಲ್ಲಾ ಆರೋಗ್ಯ ಚಿಕಿತ್ಸೆಗೂ ಅನ್ವಯವಾಗುವಂತೆ ನಿಗದಿತ ಪ್ರೀಮಿಯಂನ್ನು ಸಂಘದ ಸದಸ್ಯರು ಹಾಗೂ ಸಂಘ ಸಮಾನವಾಗಿ ಪಾವತಿಸಿ ಸೌಲಭ್ಯವನ್ನು ಜಾರಿಗೊಳಿ ಸಬೇಕೆಂದು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಗಣಪತಿ ಈ ಹಿಂದೆ ಯಶಸ್ವಿನಿ ಯೋಜನೆಯಿಂದ ಹೆಚ್ಚಿನ ಸದಸ್ಯರಿಗೆ ಪ್ರಯೋಜನವಾಗುತ್ತಿದ್ದು, ಆಯುಷ್ಮಾನ್ ಭಾರತ ಯೋಜನೆ ಯಿಂದ ಎ.ಪಿ.ಎಲ್. ಕಾರ್ಡ್ ದಾರರಿಗೆ ಪ್ರಯೋಜನಕ್ಕೆ ಬರುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಈ ಮನವಿ ಬಗ್ಗೆ ಸಹಕಾರ ಸಂಘದಿಂದ ಠರಾವು ಬಂದರೆ ನಮ್ಮ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್‍ದೇವಯ್ಯ, ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಜಿ ಮಾಣೀರ ವಿಜಯನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಒಕ್ಕೂಟದ ಮಹಿಳಾ ಘಟಕದ ಪದಾಧಿಕಾರಿ ಗಳಾದ ಆಶಾ ಜೇಮ್ಸ್, ತೀತೀರ ಊರ್ಮಿಳ, ಚೇಂದೀರ ಸುಮಿ ಸುಬ್ಬಯ್ಯ, ಗೋಣಿಕೊಪ್ಪ ಎ.ಪಿ.ಎಂ.ಸಿ. ನಿದೆರ್Éೀಶಕಿ ಕಡೇಮಾಡ ಕುಸುಮ ಜೋಯಪ್ಪ, ಬೊಳ್ಳೇರ ರಾಜಸುಬ್ಬಯ್ಯ, ಕಳ್ಳ್ಳಿಚಂಡ ರತ್ನ ಅರಮಣಮಾಡ ಮೋಟಯ್ಯ, ಚೇಂದೀರ ಸುಮಿತ, ಅಣ್ಣಳಮಾಡ ಸುರೇಶ್, ಮೀದೇರಿರ ಕವಿತ ಮತ್ತಿತರರು ಮಾತನಾಡಿದರು.