ಕುಶಾಲನಗರ, ಸೆ. 17: ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲ ವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್.ಶಿವರಾಮೇ ಗೌಡ ಆರೋಪಿಸಿ ದರು.

ಕುಶಾಲನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಎಲ್ಲವನ್ನೂ ಕಳೆದುಕೊಂಡು ನಲುಗಿದ ರೈತರು, ಕೃಷಿಕರು, ನೇಕಾರರು ಸೂಕ್ತ ಪರಿಹಾರ ದೊರಕದೆ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸಂಘಟನೆಯ ಶಕ್ತಿ ಬಳಸಿಕೊಂಡು ಸಂತ್ರಸ್ತರಿಗೆ ಹೆಚ್ಚಿನ ಮಟ್ಟದಲ್ಲಿ ಸಹಕಾರ ನೀಡಲು ಪ್ರಯತ್ನಿಸಲಾಗುತ್ತಿದೆ. ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದ ಸರಕಾರದ ವ್ಯವಸ್ಥೆಯನ್ನು ಬಡಿದೆಬ್ಬಿಸಲು ಸಂಘಟನೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎರಡನೇ ಬಾರಿ ಪ್ರಕೃತಿ ವಿಕೋಪದಿಂದ ಹೆಚ್ಚಿನ ಮಟ್ಟದ ಹಾನಿ ಉಂಟಾಗಿದೆ. ಸಂಘಟನೆಯ ಸ್ಥಳೀಯ ಪ್ರಮುಖರೊಂದಿಗೆ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳ ಪರಿಹಾರ ಕಿಟ್ ವಿತರಿಸಲಾಗುವದು ತಡೆಗಟ್ಟಲು ಸಂಘಟನೆಯ ಶಕ್ತಿ ಬಳಸಿಕೊಂಡು ಸಂತ್ರಸ್ತರಿಗೆ ಹೆಚ್ಚಿನ ಮಟ್ಟದಲ್ಲಿ ಸಹಕಾರ ನೀಡಲು ಪ್ರಯತ್ನಿಸಲಾಗುತ್ತಿದೆ. ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸದ ಸರಕಾರದ ವ್ಯವಸ್ಥೆಯನ್ನು ಬಡಿದೆಬ್ಬಿಸಲು ಸಂಘಟನೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎರಡನೇ ಬಾರಿ ಪ್ರಕೃತಿ ವಿಕೋಪದಿಂದ ಹೆಚ್ಚಿನ ಮಟ್ಟದ ಹಾನಿ ಉಂಟಾಗಿದೆ. ಸಂಘಟನೆಯ ಸ್ಥಳೀಯ ಪ್ರಮುಖರೊಂದಿಗೆ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳ ಪರಿಹಾರ ಕಿಟ್ ವಿತರಿಸಲಾಗುವದು