ಸೋಮವಾರಪೇಟೆ, ಸೆ. 16: ರೋಟರಿ ಸೋಮವಾರಪೇಟೆ ಹಿಲ್ಸ್ ವತಿಯಿಂದ ಜೀವನ್ ಸಂಧ್ಯಾ ಯೋಜನೆಯಡಿ ಕ್ಯಾನ್ಸರ್ ಪೀಡಿತ ವ್ಯಕ್ತಿ ಯೋರ್ವರಿಗೆ 5 ಸಾವಿರ ರೂ.ಗಳ ಸಹಾಯ ಧನವನ್ನು ವಿತರಿಸಲಾಯಿತು. ಇಲ್ಲಿನ ಸಫಾಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂತಿ ಗ್ರಾಮದ ರೋಗಿಯ ಕುಟುಂಬದವರಿಗೆ ಸಹಾಯಧನವನ್ನು ಅಧ್ಯಕ್ಷ ಡಿ. ಪಿ. ರಮೇಶ್ ನೀಡಿದರು. ರೋಟರಿ ಮಾಜಿ ಸಹಾಯಕ ರಾಜ್ಯಪಾಲ ಬಿ.ಎಸ್. ಸದಾನಂದ, ಕಾರ್ಯದರ್ಶಿ ಎಚ್. ಸಿ. ಲೋಕೇಶ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.