ಶನಿವಾರಸಂತೆ, ಸೆ. 18: ಸೋಮವಾರಪೇಟೆ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದ ಕಬಡ್ಡಿ ಟೂರ್ನಿ ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಬಾಲಿಕ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ತಾ. 21 ರಂದು ನಡೆಯಲಿದೆ.

ತಾಲೂಕಿನ 28 ಕಾಲೇಜುಗಳಿಂದ 19 ಬಾಲಕರ ತಂಡ ಹಾಗೂ 9 ಬಾಲಕಿಯರ ತಂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತವೆ ಎಂದು ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.