ಮಡಿಕೇರಿ, ಸೆ. 18: ತಾ. 20ರಂದು ಮಡಿಕೇರಿಯ ಓಂಕಾದ ಸದನದಲ್ಲಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಮತ್ತು ನಗರ ಬಿಜೆಪಿಯಿಂದ ಮಾನಸಿಕ ಮತ್ತು ಮೂಳೆ, ಕೀಲು ತಜ್ಞರ ಸಹಕಾರದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ಸಪ್ತಾಹವು ತಾ. 22ರಂದು ಮುಕ್ತಾಯಗೊಳ್ಳಲಿದೆ. ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘‘ಆಯುಷ್ಮಾನ್ ಭಾರತ ಯೋಜನೆ’’ಯನ್ನು ಜನರ ಬಳಿಗೆ ತಲಪಿಸುವ ನಿಟ್ಟಿನಲ್ಲಿ ಆಯ್ದ ಕೆಲವು ಬಡಾವಣೆ ಮತ್ತು ಹಾಡಿಗಳಲ್ಲಿ ನೇರವಾಗಿ ಆಯುಷ್ಮಾನ್ ಭಾರತ ಕಾರ್ಡ್‍ನ್ನು ಫಲಾನುಭವಿಗಳಿಗೆ ತಲಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾ. 21ರಂದು ಸೋಮವಾರಪೇಟೆ ಕೊಡವ ಸಮಾಜದಲ್ಲಿ ಕಣ್ಣಿನ ತಪಾಸಣೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಕೊಡಗು ಜಿಲ್ಲಾ ಸಂಚಾಲಕರಾಗಿ ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಸಹ ಸಂಚಾಲಕರಾಗಿ ಅನಿತಾ ಪೂವಯ್ಯ, ಮಡಿಕೇರಿ ತಾಲೂಕು ಸಂಚಾಲಕರಾಗಿ ಕಾಂಗೀರ ಅಶ್ವಿನ್ ಸತೀಶ್, ಸಹ ಸಂಚಾಲಕರಾಗಿ ಭೀಮಯ್ಯ ಮೇಕೇರಿ, ವೀರಾಜಪೇಟೆ ತಾಲೂಕು ಸಂಚಾಲಕ ನೆಲ್ಲಿರ ಚಲನ್ ಮತ್ತು ಸಹ ಸಂಚಾಲಕರಾಗಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಸುಬ್ರಮಣಿ, ಸೋಮವಾರಪೇಟೆ ವಿಭಾಗದಿಂದ ಸಂಚಾಲಕರಾಗಿ ನವನೀತ ಮತ್ತು ಸಹ ಸಂಚಾಲಕರಾಗಿ ಮೋಕ್ಷಿತ್, ಮಡಿಕೇರಿ ನಗರ ಸಂಚಾಕರಾದ ಮೋಂತಿ ಗಣೇಶ್, ಸಹ ಸಂಚಾಲಕರಾಗಿ ಕೆ.ಎಸ್. ರಮೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರೊಂದಿಗೆ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಅಧ್ಯಕ್ಷ ಡಾ. ನವೀನ್, ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್ ಹಾಗೂ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಮುಂದೆ ಇನ್ನೂ ಅನೇಕ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಸುವದಾಗಿ ಸೇವಾ ಸಪ್ತಾಹದ ಜಿಲ್ಲಾ ಸಂಚಾಲಕ ಮಹೇಶ್ ಜೈನಿ ತಿಳಿಸಿದ್ದಾರೆ.