ಗೋಣಿಕೊಪ್ಪ ವರದಿ, ಸೆ. 18 : ಆನೆಚೌಕೂರು ವನ್ಯಜೀವಿ ವಲಯದ ನೊಕ್ಯ ಗ್ರಾಮದಲ್ಲಿ ಮುರಿದು ಬಿದ್ದಿರುವ ರೈಲ್ವೆ ಕಂಬಿ ದುರಸ್ತಿ ಕಾರ್ಯ ಆರಂಭಗೊಂಡಿದೆ.

ಹುಣಸೂರು ಉಪವಿಭಾಗ ಎಸಿಎಫ್ ಪ್ರಸನ್ನಕುಮಾರ್ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿದ್ದಾರೆ. 3 ಕಡೆಗಳಲ್ಲಿ ಮುರಿದು ಬಿದ್ದಿರುವ ಕಂಬಗಳನ್ನು ತೆರವುಗೊಳಿಸಿ ಮರು ಜೋಡಣೆಗೆ ನಡೆಸಲಾಗುತ್ತಿದೆ.

ಈ ಬಗ್ಗೆ ಸ್ಥಳೀಯ ರೈತರಾದ ಚೆಪ್ಪುಡೀರ ಕಾರ್ಯಪ್ಪ, ಕರುಣಾಕರ್, ಎಚ್. ಎಸ್. ಮಹೇಶ್, ಅಶೋಕ್, ಶ್ರೀನಿವಾಸ್ ಇವರುಗಳು ಸರಿಪಡಿಸುವಂತೆ 4 ದಿನಗಳ ಹಿಂದಷ್ಟೆ ಸ್ಥಳಕ್ಕೆ ತೆರಳಿ ಆಗ್ರಹಿಸಿದ್ದರು. ಗ್ರಾಮಕ್ಕೆ ಬರುವ ಆನೆಗಳಿಂದ ಬೆಳೆ ಕಳೆದುಕೊಳ್ಳುತ್ತಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬೆಳೆಗಾರರ ಒತ್ತಾಯಕ್ಕೆ ಮಣಿದು ಇದಕ್ಕೆ ಪೂರಕವಾಗಿ ಕ್ರಮಕೈಗೊಳ್ಳಲಾಗಿದೆ.