ಸೋಮವಾರಪೇಟೆ, ಸೆ.18: ತಾ. 19ರಂದು(ಇಂದು) ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತಾ.19ರಂದು ವಿದ್ಯುತ್ ಸ್ಥಗಿತಗೊಳ್ಳುವದರಿಂದ ಪಟ್ಟಣದ ನೀರು ಸಂಗ್ರಹಗಾರದಲ್ಲಿ ನೀರನ್ನು ಶೇಖರಿಸಿಡಲು ಸಾಧ್ಯವಾಗುವದಿಲ್ಲ. ಪರಿಣಾಮ ತಾ.20ರಂದು ನೀರು ಸರಬರಾಜು ಮಾಡಲು ಅಸಾಧ್ಯವಾದ ಹಿನ್ನೆಲೆ ತಾ.19ರಂದೇ ಕುಡಿಯುವ ನೀರು ಶೇಖರಿಸಿಟ್ಟುಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ತಿಳಿಸಿದ್ದಾರೆ.