ಮಡಿಕೇರಿ, ಸೆ. 18: ಮಾನವೀಯ ಅಡಿಪಾಯದಲ್ಲಿ ಸೇವಾ ಸಂಸ್ಥೆಗಳು ತಮ್ಮ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಜನಮಾನಸ ದಲ್ಲಿ ತಮ್ಮ ಅಸ್ಥಿತ್ವವನ್ನು ಉಳಿಸಿ ಕೊಳ್ಳುತ್ತದೆ ಎಂದು ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಕಳ್ಳೀರ ಎಸ್. ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ತಾಲೂಕು ಮರಗೋಡು ಗ್ರಾಮ ಪಂಚಾಯಿತಿ ಮತ್ತು ಸಂತ ಜೋಸೆಫ್ ಸೇವಾ ಸಂಸ್ಥೆಗಳು ಮೈಸೂರು, ಸಂತ ಮೇರಿಸ್ ಆಸ್ಪತ್ರೆ ಪಿರಿಯಾಪಟ್ಟಣ ಸಂಯುಕ್ತ ಆಶ್ರಯದಲ್ಲಿ ಕಟ್ಟೆಮಾಡು ಪರಂಬು ಪೈಸಾರಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ ನೆರೆ ಸಂತ್ರಸ್ತ ಕುಟುಂಬಗಳಿಗೆ ಏರ್ಪಡಿಸಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಮರಗೋಡು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ, ಗ್ರಾಮವು ನೆರೆ ಪೀಡಿತದಿಂದ ತತ್ತರಿಸಿದ್ದು, ಇಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾಮಕ್ಕೆ ಆರೋಗ್ಯ ಸೇವೆಯನ್ನು ಒದಗಿಸಿದೆ ಗ್ರಾಮದಲ್ಲಿ ರುವ ಸಮಸ್ಯೆಗಳಿಗೆ ಸರ್ಕಾರವು ಒಂದು ರೀತಿಯಲ್ಲಿ ಸ್ಪಂದನ ನೀಡಿದರೆ ಖಾಸಾಗಿ ಸಂಸ್ಥೆಗಳು ತಮ್ಮ ಇಚ್ಚಾನುಸಾರ ಗ್ರಾಮೀಣಾ ಭಾಗದಲ್ಲಿ ಸೇವೆಯನ್ನು ಮಾಡುತ್ತಾ ಬಂದಿದೆ. ಮಾನವೀಯ ಸೇವೆಕ್ಕಿಂತ ಮಿಗಿಲು ಯಾವ ವಿಷಯವಿಲ್ಲ. ಆದರೆ ಸೇವಾ ಮನೋಭಾವವಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಂಬು ಪೈಸಾರಿಯ 114 ಕುಟುಂಬಗಳಿಗೆ ದಿನನಿತ್ಯ ಬಳಕೆಯ ಪರಿಹಾರ ಕಿಟ್ ವಿತರಿಸಲಾಯಿತು. ಸುಮಾರು 150 ಕ್ಕಿಂತ ಅಧಿಕ ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು. ಶಿಬಿರದಲ್ಲಿ ಕ್ರೈಸ್ತ ಶಾಲೆಯ ಶಿಕ್ಷಕರಾದ ವೀಣಾ ಸೋಫಿಯಾ, ವಿದ್ಯಾರ್ಥಿ ಗಳಾದ ಸುಶ್ಮೀತ, ತನ್ಮಯಿ, ಅಚ್ಚುತ್ತ ಮತ್ತು ಕವನ ಅವರುಗಳು ಸಹಕಾರ ನೀಡಿದರು.

ವೇದಿಕೆಯಲ್ಲಿ ಸಂತ ಜೋಸೆಫ್ ಸೇವಾ ಸಂಸ್ಥೆಗಳ ನಿರ್ದೇಶಕ ಫಾ. ರೇನ್ನಿ ಜೋನ್, ಸಂತ ಕ್ರೈಸ್ತ ಸಮೂಹ ಶಾಲೆಗಳು ತಾಂಡವಪುರ ನಂಜನಗೂಡು ಪ್ರಾಂಶುಪಾಲರಾದ ಫಾ. ಬಿನೂ ಸಂತ ಮೇರಿಸ್ ಅಸ್ಪತ್ರೆ ಪಿರಿಯಪಟ್ಟಣ ಅಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮರಸ್ಸಿ, ಕನ್ಯಸ್ತಿೃ ಲಿಜ್ಜಿ, ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಎಂ. ಬೋಜಿ ಮತ್ತು ಮಾಜಿ ಸದಸ್ಯರಾದ ಪಿ.ಬಿ. ಬಾಲಕೃಷ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಶಾಲೆಯ ಶಿಕ್ಷಕಿ ಭವಾನಿ ಸುಧ ಸ್ವಾಗತಿಸಿ, ವಂದಿಸಿದರು. ಆರೋಗ್ಯ ಶಿಬಿರದಲ್ಲಿ ಗ್ರಾಮ 200 ಅಧಿಕ ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡರು.