ಸಿದ್ದಾಪುರ: ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ-ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮ ಸಿದ್ದಾಪುರದಲ್ಲಿ ನಡೆಯಿತು.

80ನೇ ಗೌರಿ-ಗಣೇಶ ವಿಸರ್ಜನೋತ್ಸವ ಅಂಗವಾಗಿ ಅಲಂಕೃತ ಬೆಳ್ಳಿ ರಥದಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಕುಳ್ಳಿರಿಸಿ ಶ್ರದ್ಧಾಭಕ್ತಿಯಿಂದ ವಾದ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಕಾವೇರಿ ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಭಕ್ತರು ಕುಣಿದು ಕುಪ್ಪಳಿಸಿದರು.

ಶ್ರೀರಾಮ ಮಂದಿರ ಗೌರಿ-ಗಣೇಶ ಉತ್ಸವ ಸಮಿತಿಯ ಪ್ರಮುಖರಾದ ರಾಜಮ್ಮ ಮಾತನಾಡಿ, ಕಳೆದ ಎಂಬತ್ತು ವರ್ಷಗಳಿಂದಲೂ ಶ್ರೀ ಗೌರಿ ಗಣೇಶ ವಿಸರ್ಜನೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಹಾಗೂ ಮಳೆ ಪ್ರವಾಹದಿಂದ ಜನರು ಸಂಕಷ್ಟ ಒಳಗಾಗಿರುವ ಹಿನ್ನೆಲೆ ಇದೀಗ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಸಮಿತಿಯ ಪ್ರಮುಖರಾದ ಕಾವೇರಮ್ಮ ಮಾತನಾಡಿ, ಶ್ರೀರಾಮ ಮಂದಿರ ಗೌರಿ-ಗಣೇಶ ವಿಸರ್ಜನೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಬಾಂಧವರು ಭಾಗವಹಿಸುವ ಮೂಲಕ ಸೌಹಾರ್ದತೆ ತೋರುತ್ತಿದ್ದು. ಎಂಬತ್ತು ವರ್ಷಗಳಿಂದಲೂ ಸಿದ್ದಾಪುರ ಸುತ್ತಮುತ್ತಲಿನ ಜನರು ಸಹಕಾರ ನೀಡುತ್ತಿದ್ದಾರೆ. ಭಕ್ತರಿಗೆ ವಿಸರ್ಜನೋತ್ಸವ ಅಂಗವಾಗಿ ಅನ್ನಸಂತರ್ಪಣೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದರು

ಈ ಸಂದರ್ಭ ಪ್ರಮುಖರಾದ ಗೌರಮ್ಮ, ವಿಷಕಂಠ, ಜ್ಯೋತಿ, ಗಣೇಶ, ಗುರು, ಶಿವರಾಜು, ಕಾವೇರಿ, ಮಣಿ, ಕುಮಾರ್, ಸೀಮಾ, ಅನೀಲ್, ಸಚಿನ್, ಅಜೆಯ್, ಅನಿಲ್, ರವಿ, ಶೇಷಪ್ಪ, ವಿನು, ಸದಾ, ನಾರಾಯಣ ಸೇರಿದಂತೆ ಮತ್ತಿತರರು ಹಾಜರಿದ್ದರು.ಶನಿವಾರಸಂತೆ: ಪಟ್ಟಣದ ಗಣಪತಿ ಪಾರ್ವತಿ ಚಂದ್ರಮೌಲೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಹಾಗೂ ಬಿದರೂರು ಗ್ರಾಮ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಾಲಯಗಳಲ್ಲಿ ಗೌರಿ-ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ವಿದ್ಯುತ್ ಹಾಗೂ ಹೂವುಗಳಿಂದ ಅಲಂಕೃತ ಟ್ರ್ಯಾಕ್ಟರ್‍ನಲ್ಲಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಸ್ತೆಯುದ್ದಕ್ಕೂ ಭಕ್ತರು ದೇವರಿಗೆ ಆರತಿ ಬೆಳಗಿ, ಹಣ್ಣುಕಾಯಿ ಸಮರ್ಪಿಸಿದರು.

ಮೆರವಣಿಗೆಯಲ್ಲಿ ಬಿದರೂರು ಗ್ರಾಮಸ್ಥರು, ಶನಿವಾರಸಂತೆ ಭಕ್ತ ಜನರು ನೂರಾರು ಮಂದಿ ಪಾಲ್ಗೊಂಡಿದ್ದರು. ಮಳೆ ಬಿಡುವು ನೀಡಿದ್ದು ವಿಸರ್ಜನೋತ್ಸವ ಯಶಸ್ವಿಯಾಯಿತು. ಸಮೀಪದ ಹೆಮ್ಮನೆ ಗ್ರಾಮದ ಹೊಳೆಯಲ್ಲಿ ವಿಸರ್ಜಿಸಲಾಯಿತು.

ಅರ್ಚಕರಾದ ಮಾಲತೇಶ್ ಭಟ್ ಹಾಗೂ ಮಲ್ಲೇಶ್ ಪೂಜಾ ವಿಧಿಗಳನ್ನು ನೆರವೇರಿಸಿದರು. ಗಣಪತಿ ಸೇವಾ ಸಮಿತಿ ಹಾಗೂ ಬಸವೇಶ್ವರ ದೇವಾಲಯ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಪೂಜಾ ಕಾರ್ಯಕ್ರಮಗಳಲ್ಲಿ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಗುಡ್ಡೆಹೊಸೂರು: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಯ ವಿಸರ್ಜನೆ ನೆರವೇರಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಮೆರವಣಿಗೆ ಯುದ್ದಕ್ಕೂ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ನಿಂತು ರಸ್ತೆಗಳಿಗೆ ನೀರನ್ನು ಹಾಕಿ ಗಣಪತಿಗೆ ಪೂಜೆ ಸಲ್ಲಿಸುವ ದೃಶ್ಯ ಕಂಡು ಬಂತು.

ಅನ್ನಸಂತರ್ಪಣೆ ನಡೆಸಲಾಯಿತು. ರಾತ್ರಿ ಕಾವೇರಿ ನದಿಯಲ್ಲಿ ವಿಸರ್ಜನೆ ಕಾರ್ಯ ನಡೆಯಿತು. ಈ ಸಂದರ್ಭ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.ಸಿದ್ದಾಪುರ: ಅಮ್ಮತ್ತಿಯ ಶ್ರೀ ಚೌಡೇಶ್ವರಿ ಗಣಪತಿ ಸೇವಾ ಸಮಿತಿಯ ವತಿಯಿಂದ 29ನೇ ವರ್ಷದ ಶ್ರೀ ಗೌರಿ-ಗಣೇಶ ವಿಸರ್ಜನೋತ್ಸವವನ್ನು ನಡೆಸಲಾಯಿತು.

ಗೌರಿ-ಗಣೇಶ ವಿಗ್ರಹವನ್ನು ಅಲಂಕಾರಿಕ ಮಂಟಪದಲ್ಲಿ ಕುಳ್ಳಿರಿಸಿ ಅಮ್ಮತ್ತಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಸಮೀಪದ ಕೆರೆಯಲ್ಲಿ ವಿಗ್ರಹಗಳನ್ನು ವಿಸರ್ಜಿಸಲಾಯಿತು. ಈ ಸಂದರ್ಭ ಸಮಿತಿಯ ಗೌರವ ಅಧ್ಯಕ್ಷ ಐ.ಕೆ. ಪೂಣಚ್ಚ, ಅಧ್ಯಕ್ಷ ಹೆಚ್.ವೈ. ಗೋವಿಂದ, ಕಾರ್ಯದರ್ಶಿ ಗೌತಮ್, ಹೆಚ್.ಪಿ. ರಾಜಪ್ಪ, ಸತೀಶ್, ಮಧು ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.