ಮಡಿಕೇರಿ, ಸೆ.12: ಇತಿಹಾಸ ಪ್ರಸಿದ್ಧ ನಾಡಹಬ್ಬ ಮಡಿಕೇರಿ ದಸರಾ ಉತ್ಸವ ಅಂಗವಾಗಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ವರ್ಷಂಪ್ರತಿ ಏರ್ಪಡಿಸಿಕೊಂಡು ಬರಲಾಗುತ್ತಿರುವ ಬಹುಭಾಷಾ ಕವಿಗೋಷ್ಠಿಗೆ ಕವಿ -ಕವಯತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ.

ನಾಡಹಬ್ಬದಲ್ಲಿ ಸಾಹಿತ್ಯ ಕ್ಷೇತ್ರಕ್ಕೂ ಆದ್ಯತೆ ನೀಡುವ ನಿಟ್ಟಿನಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರ, ನಾಡು-ನುಡಿ, ಸಂಸ್ಕøತಿ, ಕಲೆ, ಆಚಾರ-ವಿಚಾರ, ಪ್ರಕೃತಿ-ಪರಿಸರಗಳನ್ನೊಳ ಗೊಂಡಂತೆ ಮಡಿಕೇರಿ ದಸರಾ ಮಹೋತ್ಸವದ ಸಾರಗಳನ್ನು ಬಿಂಬಿಸುವ ಸ್ವ-ರಚಿತ ಕವನಗಳನ್ನು ಕಳುಹಿಸಿಕೊಡಬಹುದಾಗಿದೆ.

ಕನ್ನಡ, ಕೊಡವ, ಅರೆಭಾಷೆ ಸೇರಿದಂತೆ ಕವಿಗಳು ತಮ್ಮ ಮಾತೃ ಭಾಷೆಗಳಲ್ಲೂ ಕವನ ರಚಿಸಬಹುದಾಗಿದ್ದು, ಓರ್ವ ಕವಿಗೆ ಒಂದು ಕವನ ಕಳುಹಿಸಲು ಮಾತ್ರ ಅವಕಾಶವಿದೆ.

ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದ್ದು, ಕವನಗಳು ಇಪ್ಪತ್ತು ಸಾಲುಗಳಿಗೆ ಮೀರದಂತಿರಬೇಕು. ಹೊಸ ಕವಿ-ಕವಯತ್ರಿಯರಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದ್ದು, ಆಯ್ಕೆ ಸಮಿತಿಯ ತೀರ್ಮಾನ ಅಂತಿಮವಾಗಿರುತ್ತದೆ. ಎಲ್ಲ್ಲಿಯೂ ಪ್ರಕಟವಾಗಿರದ, ವಾಚಿಸದಿರುವ ಕವನಗಳನ್ನು ತಾ. 23ರ ಒಳಗಡೆ ಚಿ.ನಾ. ಸೋಮೇಶ್, ಅಧ್ಯಕ್ಷರು, ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ, ಶಕ್ತಿ ದಿನಪತ್ರಿಕೆ ಕೈಗಾರಿಕಾ ಬಡಾವಣೆ ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಮೊ. 9972538584, 9449475632 ಸಂಪರ್ಕಿಸಬಹುದಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.