ಚೆಟ್ಟಳ್ಳಿ, ಸೆ. 18; ಸಮಾಜದಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆಗೆ ಒತ್ತು ಕೊಡುವಲ್ಲಿ ಧರ್ಮ ಗುರುಗಳ ಪಾತ್ರ ಮಹತ್ತರವಾದುದು ಎಂದು ಉಡುಪಿಯ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.

ಕೊಂಡಂಗೇರಿ ಯಲ್ಲಿ ನಡೆದ ಕೂರ್ಗ್ ಜಂಇಯ್ಯತುಲ್ ಉಲಮಾ ವಾರ್ಷಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯಾವದೇ ಕಾರಣಕ್ಕೂ ಧರ್ಮಗುರುಗಳಿಂದ ಊರಿನಲ್ಲಿ, ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಬರಬಾರದು.

ಊರಿನ ಅಭಿವೃದ್ಧಿಗೆ ಹಾಗೂ ಜನರ ನಡುವಿನ ಐಕ್ಯತೆಗೆ ಆಯಾ ಜಮಾಅತ್‍ಗಳ ಧರ್ಮಗುರುಗಳು ಆದ್ಯತೆಯನ್ನು ನೀಡುವ ಮೂಲಕ ಒಳಿತಿನ ಮಾರ್ಗದರ್ಶಕರಾಗಬೇಕು ಎಂದರು.

ಕೂರ್ಗ್ ಜಮೀಯತುಲ್ ಉಲಮಾದ ಅಧ್ಯಕ್ಷ ಹಾಜಿ ಕೆ.ಎ. ಮಹಮೂದ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕೆ.ಎಂ. ಹುಸೇನ್ ಸಖಾಫಿ ಎಮ್ಮೆಮಾಡು ಅವರು ಉದ್ಘಾಟಿಸಿದರು. ಶಾದುಲಿಫಯ್ಝಿ, ಅಬ್ದುಲ್ ಮಜೀದ್ ಮದನಿ, ಉಸ್ಮಾನ್ ಮದನಿ ಕೊಳಕೇರಿ, ಹನೀಫ್ ಸಖಾಫಿ, ಮುಸ್ತಫಾ ಸಖಾಫಿ, ಹಮೀದ್ ಮದನಿ ಮಡಿಕೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಅಶ್ರಫ್ ಅಹ್ಸನಿ ಸ್ವಾಗತಿಸಿ, ವಂದಿಸಿದರು.