ನಾಪೆÇೀಕ್ಲು, ಸೆ. 18: ನಾಪೆÇೀಕ್ಲು ಪಟ್ಟಣ, ಮೂಟೇರಿ ಅಂಗನವಾಡಿ ಹಾಗೂ ಭಗವತಿ ಸ್ತ್ರೀ ಶಕ್ತಿ ಸಂಘದ ಸಂಯುಕ್ತಾಶ್ರಯದಲ್ಲಿ ಸಮೀಪದ ಹಳೇತಾಲೂಕು ಅಂಗನವಾಡಿ ಕೇಂದ್ರದಲ್ಲಿ ಸೀಮಂತ, ಪೌಷ್ಟಿಕ ಆಹಾರ ಮತ್ತು ಅನ್ನ ಪ್ರಸಾನ್ನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೀಲಾ ಮಾತನಾಡಿ ಪೆÇೀಷಣಾ ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ, ರಕ್ತ ಹೀನತೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ, ಮಾತೃವಂದನಾ, ಮಾತೃಶ್ರೀ, ಇಂತಹ ಹಲವಾರು ಯೋಜನೆಗಳು ಸಿಗುತ್ತದೆ. ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ ಮಾಡಲಾಗುತ್ತದೆ. ಮಾತೃವಂದನಾ ಯೋಜನೆಯಡಿಯಲ್ಲಿ ಮೊದಲನೆ ಮಗುವಿನ ಗರ್ಭಿಣಿಯರಿಗೆ 5 ಸಾವಿರ ರೂ. ಹಾಗೂ ಬಿಪಿಎಲ್ ಕಾರ್ಡ್‍ದಾರರಿಗೆ ಮೊದಲನೆ ಹಾಗೂ ಎರಡನೇ ಮಗುವಿನ ಗರ್ಭಿಣಿಯರಿಗೆ 6 ಸಾವಿರ ರೂ. ನೀಡಲಾಗುವದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಸಮಾಜದ ಅಧ್ಯಕ್ಷೆ ಕೇಲೇಟಿರ ಚಿತ್ರಾ ನಾಣಯ್ಯ ಸರಕಾರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಮಕ್ಕಳು ಆರೋಗ್ಯವಂತರಾಗಿರಬೇಕಾದರೆ ಮನೆ ಪರಿಸರವನ್ನು ಸ್ವಚ್ಛವಾಗಿಡಬೇಕು. ಮಳೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಈ ಬಗ್ಗೆ ತಾಯಂದಿರು ಹೆಚ್ಚಿನ ನಿಗಾವಹಿಸಬೇಕು ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ನಿವೃತ್ತ ಶಿಕ್ಷಕಿ ಶಿವಚಾಳಿಯಂಡ ಪಾರ್ವತಿ, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಚೀಯಕಪೂವಂಡ ಮುತ್ತುರಾಣಿ, ಪುಲ್ಲೇರ ಪದ್ಮಿನಿ, ಅಂಗನವಾಡಿ ನಿವೃತ್ತ ಶಿಕ್ಷಕಿಯರಾದ ಸುಶೀಲಾ, ಮೀನಾ, ಅಂಗನವಾಡಿ ಶಿಕ್ಷಕಿಯರಾದ ಭಾಗ್ಯವತಿ, ಜ್ಯೋತಿ, ಕೃತಿಕ, ಆರೋಗ್ಯ ಕಾರ್ಯಕರ್ತೆ ಉಮಾಮಹೇಶ್ವರಿ ಮತ್ತಿತರರಿದ್ದರು.