ಮಡಿಕೇರಿ, ಸೆ.18 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಹಿನ್ನೆಲೆಯಲ್ಲಿ ನಗರ ದಸರಾ ಸಮಿತಿ ಮತ್ತು ಕ್ರೀಡಾಸಮಿತಿ ವತಿಯಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ತಾ.21 ರಂದು ಚಾಲನೆ ದೊರೆÀಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದಸರಾ ಕ್ರೀಡಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಡಿ.ಕಪಿಲ್ ಕುಮಾರ್, ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದಲ್ಲಿ ವಿಶೇಷವಾಗಿ ಜಿಲ್ಲಾ ಮಟ್ಟದ ‘ವುಶು ಬಾಕ್ಸಿಂಗ್’ ಸ್ಪರ್ಧೆಯನ್ನು ತಾ.28 ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಒಳಾಂಗಣದಲ್ಲಿ ಆಯೋಜಿಸಿ ರುವದಾಗಿ ಹೇಳಿದರು.ದಸರಾ ಕ್ರೀಡಾಕೂಟದ ಪ್ರಥಮ ಸ್ಪರ್ಧಾ ಕಾರ್ಯಕ್ರಮ ಮೆರಥಾನ್‍ಗೆ ತಾ. 21 ಬೆಳಿಗ್ಗೆ 6.30 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಚಾಲನೆ ದೊರೆಯಲಿದೆ. ಅಂದು 1 ರಿಂದ 3ನೇ ತರಗತಿ ಬಾಲಕ ಬಾಲಕಿಯರಿಗೆ 1 ಕಿ. ಮೀ. ಓಟ, 4 ರಿಂದ 5ನೇ ತರಗತಿ ಬಾಲಕ ಬಾಲಕಿಯರಿಗೆ 1.5 ಕಿ.ಮೀ. ಓಟ, 6 ರಿಂದ 7ನೇ ತರಗತಿ ಬಾಲಕ ಬಾಲಕಿಯರಿಗೆ 2 ಕಿ.ಮೀ. ಓಟ ಹಾಗೂ 8 ರಿಂದ 10ನೇ ತರಗತಿ ಬಾಲಕ ಬಾಲಕಿಯರಿಗೆ 5 ಕಿ. ಮೀ ಓಟದ ಸ್ಪರ್ಧೆ ನಡೆಯಲಿದ್ದು, ಸಾರ್ವಜನಿಕ ಪುರುಷರಿಗೆ 10 ಕಿ.ಮೀ. ಓಟ ಹಾಗೂ ಮಹಿಳೆಯರಿಗೆ 5 ಕಿ. ಮೀ. ಓಟದ ಸ್ಪರ್ಧೆ ನಡೆಯಲಿದೆ ಎಂದರು.ತಾ. 22 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, 6 ವರ್ಷದ ಮಕ್ಕಳಿಗೆ ಕಾಳು (ಮೊದಲ ಪುಟದಿಂದ) ಹೆಕ್ಕುವದು ಮತ್ತು ಕಪ್ಪೆ ಜಿಗಿತ ಸ್ಪರ್ಧೆ ನಡೆಯಲಿದೆ. 1 ರಿಂದ 3ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 50 ಮೀ. ಓಟ, 75 ಮೀ. ಓಟ, 4 ರಿಂದ 5ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 50 ಮೀ. ಓಟ, 75 ಮೀ. ಓಟ, 6 ರಿಂದ 7ನೇ ತರಗತಿ ಮಕ್ಕಳಿಗೆ 100 ಮೀ., 200 ಮೀ. ಓಟ, 8 ರಿಂದ 10 ನೇ ತರಗತಿ ಮಕ್ಕಳಿಗೆ 100 ಮೀ., 400 ಮೀ. ಓಟದ ಸ್ಪರ್ಧೆ ನಡೆಯಲಿದೆ ಎಂದರು.

ಸಾಮಾನ್ಯ ವಿಭಾಗದ ಪುರುಷರಿಗೆ ಮತ್ತು ಮಹಿಳೆಯರಿಗೆ 100 ಮೀ., 400 ಮೀ ಓಟ ಹಾಗೂ ಭಾರದ ಗುಂಡು ಎಸೆತ, ಹಗ್ಗ-ಜಗ್ಗಾಟ ಸ್ಪರ್ಧೆ ನಡೆಯಲಿದೆ. ಅಲ್ಲದೆ, ಮಹಿಳೆಯರಿಗೆ ಮುಕ್ತ ಥ್ರೋಬಾಲ್ ಪಂದ್ಯಾವಳಿ ಹಾಗೂ ಪುರುಷರಿಗೆ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಆಸಕ್ತ ತಂಡಗಳ ಹೆಸರನ್ನು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲಾಗುವದೆಂದು ಮಾಹಿತಿ ನೀಡಿದರು.

ಹಿರಿಯ ನಾಗರಿಕರಿಗೆ 100 ಮೀ. ನಡಿಗೆ, ಸಾಮಾನ್ಯ ವಿಭಾಗದವರಿಗೆ ನಿಧಾನ ಮೋಟರ್ ಸೈಕಲ್ ರೇಸ್, ಪತ್ರಕರ್ತರಿಗೆ 100 ಮೀ. ಓಟ, ಭಾರದ ಗುಂಡು ಎಸೆತ, ಟೇಬಲ್ ಟೆನ್ನಿಸ್, ಚೆಸ್, ಕೇರಂ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅಲ್ಲದೇ ದಸರಾ ಸಮಿತಿಯ ಪುರುಷ ಮತ್ತು ಮಹಿಳಾ ಸದಸ್ಯರಿಗೆ ಹಾಗೂ ನಗರ ಸಭಾ ನೌಕರರಿಗೆ 100 ಮೀ. ಓಟ ಹಾಗೂ ಭಾರದ ಗುಂಡು ಎಸೆತ ಸ್ಪರ್ಧೆ ನಡೆಯಲಿದೆಯೆಂದರು.

ಅ.5 ಮತ್ತು 6 ರಂದು ಮಹಿಳೆಯರಿಗೆ ಮತ್ತು ಪುರುಷರಿಗೆ ಹಾಗೂ 10 ವರ್ಷ, 15 ವರ್ಷ, 19 ವರ್ಷದೊಳಗಿನವರಿಗೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಆಯೋಜಿಸಲಾಗಿದ್ದು, ಈ ಬಗ್ಗೆ ಪ್ರವೀಣ್ ಎನ್. (ಮೊ.7975855131) ಇವರನ್ನು ಸಂಪರ್ಕಿಸಬಹುದಾಗಿದೆ.

ಅದೇ ದಿನಗಳಲ್ಲಿ 14 ವರ್ಷ, 21 ವರ್ಷದೊಳಗಿನವರಿಗೆ ಹಾಗೂ ಮಹಿಳೆಯರು ಮತ್ತು ಪುರುಷರಿಗೆ ಟಿ.ಟಿ. ಸ್ಪರ್ಧೆ ಏರ್ಪಡಿಸಲಾಗಿದ್ದು, ರಚನ್ ಪೊನ್ನಪ್ಪ (ಮೊ.9980000438) ರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಸೆ. 28 ರಂದು ನಡೆಯಲಿರುವ ವುಶು ಬಾಕ್ಸಿಂಗ್ ಸ್ಪರ್ಧೆಯ ಬಗ್ಗೆ ಆಸಕ್ತರು ಎಸ್.ಸಿ. ಸುದರ್ಶನ್ 6363439258 ಸಂಪರ್ಕಿಸಬಹು ದಾಗಿದೆ. ಮೊದಲ ಬಾರಿಗೆ ನಡೆಯುತ್ತಿರುವ ಈ ಕ್ರೀಡೆಯಲ್ಲಿ ಮೂವತ್ತು ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಪಿಲ್ ಹೇಳಿದರು.

ಸೆ. 29 ರಂದು ನಗರದ ಶ್ರೀ ರಾಜರಾಜೇಶ್ವರಿ ಶಾಲಾ ಮೈದಾನದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಆಸಕ್ತರು ಪೊನ್ನಚ್ಚನ ಮಧು 9880381831 ಅವರನ್ನು ಸಂಪರ್ಕಿಸಬಹುದಾಗಿದೆ.

ಕಬಡ್ಡಿ ಆಕರ್ಷಣೆ

ಅ.1 ರಂದು ನಗರದ ಗಾಂಧಿ ಮೈದಾನದಲ್ಲಿ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಆಸಕ್ತ ತಂಡಗಳು ಸೆ.30ರ ಸಂಜೆ 5 ಗಂಟೆಯ ಒಳಗೆ ಪ್ರವೇಶ ಶುಲ್ಕ 1000 ರೂ.ಗಳೊಂದಿಗೆ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು. ಕಳೆದ ಬಾರಿ 30 ತಂಡಗಳು ಭಾಗವಹಿಸಿದ್ದು, ಈ ಬಾರಿ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಹೆಚ್ಚಿನ ಮಾಹಿತಿಗೆ 9731009841, 9945258604 ಸಂಪರ್ಕಿಸ ಬಹುದಾಗಿದೆ. ದಸರಾ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವದು ಎಂದರು.

ರೂ.3.20 ಲಕ್ಷದ ಪ್ರಸ್ತಾವನೆ

ದಸರಾ ಕ್ರೀಡಾಸಮಿತಿ ಅಧ್ಯಕ್ಷ ಬಿ.ಎಂ.ಹರೀಶ್ ಅವರು ಮಾತನಾಡಿ, ಈ ಬಾರಿಯ ಕ್ರೀಡಾಕೂಟದ ಆಯೋಜನೆಗೆ 3.20 ಲಕ್ಷದ ಪ್ರಸ್ತಾವನೆಯನ್ನು ಈಗಾಗಲೆ ದಸರಾ ಸಮಿತಿಗೆ ಸಲ್ಲಿಸಿರುವದಾಗಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಹ ಕಾರ್ಯದರ್ಶಿ ಎಂ.ಎ.ಮುನೀರ್ ಮಾಚಾರ್ ಹಾಗೂ ಉಪಾಧ್ಯಕ್ಷÀ ರಾಜೇಶ್ ಕುಯ್ಯಮುಡಿ ಉಪಸ್ಥಿತರಿದ್ದರು.