ಮಡಿಕೇರಿ, ಸೆ. 18: ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಕಾಂಗ್ರೆಸ್‍ನ 36ನೇ ಸಂಸ್ಥಾಪನಾ ದಿನವನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್, ಮಹಿಳೆಯರು ಸಾಮಾಜಿಕ ಕಳಕಳಿಯೊಂದಿಗೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ಮಾತನಾಡಿ, ಪಕ್ಷದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಮುಂದಿನ ದಿನಗಳಲ್ಲಿ ಪ್ರತಿಬೂತ್ ಮಟ್ಟದಿಂದ ಮಹಿಳಾ ಕಾಂಗ್ರೆಸ್‍ನ್ನು ಸಂಘಟಿಸಿ ಪಕ್ಷಕ್ಕೆ ಶಕ್ತಿ ತುಂಬವದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭ ಪ್ರಾಕೃತಿಕ ವಿಕೋಪದಲ್ಲಿ ನೊಂದ ಸಂತ್ರಸ್ತರಿಗೆ ನೆರವಾದ ಕೆಪಿಸಿಸಿ ಕಾರ್ಯದರ್ಶಿ ತಾಹೀರ ಹಫೀಜ್ó, ಕೈರುನ್ನಿಸಾ ಹಾಗೂ ಜಿ.ಪಂ. ಸದಸ್ಯೆ ಸುನಿತಾ ಅವರನ್ನು ಗೌರವಿಸಲಾಯಿತು. ರೇಷ್ಮಾ ಅವರನ್ನು ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಧ್ವಜ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ರಾಜೇಶ್ವರಿ, ಉದಯ್ ಚಂದ್ರಿಕ, ಮಿನಾಜ್ó ಪ್ರವೀಣ್, ರಾಣಿ ಗಣಪತಿ ಹಾಗೂ ಮಹಿಳಾ ಕಾರ್ಯಕತರು ಹಾಜರಿದ್ದರು. ಸೀತಾ ಚಿಕ್ಕಣ್ಣ ಪ್ರಾರ್ಥಿಸಿ, ಪ್ರೇಮಾ ಕೃಷ್ಣಪ್ಪ ಸ್ವಾಗತಿಸಿ, ಫ್ಯಾನ್ಸಿ ಪಾರ್ವತಿ ವಂದಿಸಿದರು.