ನಾಳೆ ವಾರ್ಷಿಕ ಮಹಾಸಭೆ

ವೀರಾಜಪೇಟೆ, ಸೆ.19: ಅಮ್ಮತ್ತಿ ಪ್ರಾಥsÀಮಿಕ ಕೃಷಿ ಪತ್ತಿನ ಸಹಕಾರ ಸಂಘ 2018-19ನೇ ಸಾಲಿನಲ್ಲಿ ರೂ.39.9ಲಕ್ಷ ಲಾಭ ಗಳಿಸಿರುವದಾಗಿ ಸಂಘದ ಅಧ್ಯಕ್ಷ ಕುಟ್ಟಂಡ ವಿನು ಪೂವಯ್ಯ ತಿಳಿಸಿದ್ದಾರೆ. ಕಳೆದ 15 ವರ್ಷಗಳಿಂದ ಸತತವಾಗಿ ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿರುವ ಸಂಘವು ಜಿಲ್ಲೆಯಲ್ಲಿಯೇ ಮಾದರಿ ಸಹಕಾರ ಸಂಘವೆನಿಸಿದೆ. ಸದಸ್ಯರುಗಳಿಗೆ ಈ ವರ್ಷ ಶೇ. 20ರಷ್ಟು ಡಿವಿಡೆಂಡ್ ಪಾವತಿಸಲಾಗುವದು. 2,540 ಸದಸ್ಯರುಗಳನ್ನು ಹೊಂದಿರುವ ಸಂಘದಲ್ಲಿ ರೂ. 110.20 ಲಕ್ಷ ಪಾಲು ಬಂಡವಾಳ ಹಾಗೂ 211.44 ಲಕ್ಷ ರೂಪಾಯಿಗಳ ಇತರ ನಿಧಿಗಳು ಇರುವದಾಗಿ ಅವರು ತಿಳಿಸಿದರು. 2018-19ನೇ ಸಾಲಿನಲ್ಲಿ 1870.14 ಲಕ್ಷ ಠೇವಣಿ ಹೊಂದಿದ್ದು 1908.54 ಲಕ್ಷ ರೂ.ಗಳ ಸಾಲ ವಿತರಿಸಲಾಗಿದ್ದು, ಒಟ್ಟು ವಹಿವಾಟು 9893.43 ಲಕ್ಷ ಆಗಿರುತ್ತದೆ. ಸಂಘದ ವಾರ್ಷಿಕ ಮಹಾಸಭೆ ತಾ. 21ರಂದು (ನಾಳೆ) ಬೆಳಿಗ್ಗೆ 10.30 ಗಂಟೆಗೆ ಸಂಘದ ಸಭಾಂಗಣದಲ್ಲಿ ನಡೆಯಲಿರುವದಾಗಿ ಅವರು ತಿಳಿಸಿದರು.