ಮಡಿಕೇರಿ, ಸೆ. 19: ಐಬಿಪಿಸ್ ಅವರ ವತಿಯಿಂದ ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ 12,075 ಗುಮಾಸ್ತರ ಹುದ್ದೆಗಳಿಗೆ (ಇದರಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 953 ಖಾಲಿ ಹುದ್ದೆಗಳು) ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಆನ್‍ಲೈನ್‍ನಲ್ಲಿ ಅಂತರ್ಜಾಲ ತಾಣ ತಿತಿತಿ.ibಠಿs.iಟಿ ಮುಖಾಂತರ ಅಕ್ಟೋಬರ್ 9 ರೊಳಗೆ ಸಲ್ಲಿಸಬೇಕು. ನೇಮಕಾತಿಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನವನ್ನು ಒಳಗೊಂಡಿರುತ್ತದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳು ಆನ್‍ಲೈನ್ ಪರೀಕ್ಷೆಯಾಗಿರುತ್ತದೆ.

ಯಾವದೇ ಪದವಿಯಲ್ಲಿ ಉತ್ತೀರ್ಣ(2019ರ ಅಕ್ಟೋಬರ್, 9ಕ್ಕೆ ಅನ್ವಯವಾಗುವಂತೆ), 2019ರ ಸೆಪ್ಟೆಂಬರ್ 1 ಕ್ಕೆ ಕನಿಷ್ಟ 20 ವರ್ಷಗಳು, ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 28 ವರ್ಷಗಳು, ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 33 ವರ್ಷಗಳು, ಓಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 31 ವರ್ಷಗಳು. ಎಸ್‍ಸಿ, ಎಸ್‍ಟಿ, ಪಿ.ಡಬ್ಲ್ಯುಡಿ, ಎಕ್ಸ್ ಸರ್ವೀಸ್‍ಮೆನ್ ಅಭ್ಯರ್ಥಿಗಳಿಗೆ ರೂ. 100, ಇತರ ವರ್ಗದ ಅಭ್ಯರ್ಥಿಗಳಿಗೆ ರೂ. 600 ಆಗಿರುತ್ತದೆ.

ಪರೀಕ್ಷೆಯು ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಗುಲ್ಬರ್ಗ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿಯಲ್ಲಿ ನಡೆಯಲಿದೆ. 2019ರ ಡಿಸೆಂಬರ್ 7, 8 ಮತ್ತು 14 ಹಾಗೂ 21 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. 2020ರ ಜನವರಿ, 19 ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಯನ್ನು ತಿತಿತಿ.ibಠಿs.iಟಿ ಮೂಲಕ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.