ಮಡಿಕೇರಿ, ಸೆ. 19: ಕರ್ನಾಟಕ ರಾಜ್ಯ ವಸತಿ ಖಾತೆ ಹಾಗೂ ಕೊಡಗು ಜಿಲ್ಲೆಯ ಹೆಚ್ಚುವರಿ ಉಸ್ತುವಾರಿ ಸಚಿವ ಎ. ಸೋಮಣ್ಣ ಅವರನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರುಗಳು ಭೇಟಿ ಮಾಡಿ ಕೊಡಗಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ.ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿದ್ದ ಪ್ರಮುಖರು, ಕೊಡಗಿನಲ್ಲಿ ಹದಗೆಟ್ಟಿರುವ ರಸ್ತೆಗಳು, ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಸಮಸ್ಯೆಗಳು, ಸಂತ್ರಸ್ತರ ವಸತಿ ಯೋಜನೆ ಜಾರಿ ಸಂಬಂಧ ಬೇಡಿಕೆ ಸಲ್ಲಿಸಿದರು.(ಮೊದಲ ಪುಟದಿಂದ) ಈ ವೇಳೆ ಸಚಿವ ಸೋಮಣ್ಣ ಅವರು, ತಾ. 23 ರಂದು ಖುದ್ದಾಗಿ ಜಿಲ್ಲೆಗೆ ಆಗಮಿಸುವದರೊಂದಿಗೆ; ಸ್ಥಳದಲ್ಲೇ ಸಮಸ್ಯೆಗಳಿಗೆ ಸ್ಪಂದಿಸುವ ಆಶ್ವಾಸನೆ ನೀಡಿದ್ದು, ಕುಡಿಯುವ ನೀರು, ಗ್ರಾಮೀಣ ರಸ್ತೆ ಅಭಿವೃದ್ಧಿ, ವಸತಿ ಕುರಿತು ಆದ್ಯತೆ ಮೇರೆಗೆ ಕ್ರಮ ವಹಿಸುವದಾಗಿ ಭರವಸೆ ನೀಡಿದ್ದಾರೆ. ಈ ಭೇಟಿ ಸಂದರ್ಭ ಪಕ್ಷದ ಅರಮಣಮಾಡ ಉದಯ್ ಹಾಜರಿದ್ದರು.