ಮಡಿಕೇರಿ, ಸೆ.19: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಪಾಲುದಾರರು ಹಾಗೂ ಎಫ್.ಎಮ್.ಕೆ.ಎಮ್.ಸಿ. ಕಾಲೇಜು ಪ್ರವಾಸೋದ್ಯಮ ವಿಭಾಗದವರೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2019ನ್ನು ಆಚರಿಸಲು ತಿರ್ಮಾನಿಸಿದ್ದು, ಇದರ ಅಂಗವಾಗಿ ತಾ.27 ರಂದು ಬೆಳಿಗ್ಗೆ 7 ಗಂಟೆಗೆ ಸುದರ್ಶನ್ ವೃತ್ತದಿಂದ ರಾಜಾಸೀಟ್‍ವರೆಗೆ ಮ್ಯಾರಥಾನ್ ಓಟ, ಸೈಕಲ್ ಮತ್ತು ಬೈಕ್ ರ್ಯಾಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿವುಳ್ಳವರು ತಾ. 25 ರೊಳಗೆ ತಮ್ಮ ಹೆಸರುಗಳನ್ನು ಸತ್ಯ ಟೂರ್ ಅಂಡ್ ಟ್ರಾವೆಲ್ ಅಸೋಸಿಯೇಷನ್ ಮೊ. ಸಂ: 9448721252/ 9620553191 ಅಥವಾ ಶರತ್, ಉಪನ್ಯಾಸಕರು, ಪ್ರವಾಸೋದ್ಯಮ ವಿಭಾಗ, ಎಫ್.ಎಮ್.ಕೆ.ಎಮ್.ಸಿ. ಕಾಲೇಜು ದೂ.ಸಂ: 9611641570 ಇಲ್ಲಿ ನೋಂದಾಯಿಸಲು ಕೋರಿದೆ. ಮೊದಲು ಹೆಸರು ನೋಂದಾಯಿಸಿ ರುವ 100 ಮಂದಿಗೆ ಮಾತ್ರ ಅವಕಾಶ ಇರುತ್ತದೆ.

ಅಲ್ಲದೇ ಅದೇ ದಿನ ನಡೆಯುವ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಲು ಆಸಕ್ತಿವುಳ್ಳವರು ತಾ. 25 ರೊಳಗೆ ಅನಂತಶಯನ, ಶಕ್ತಿ ಪತ್ರಿಕೆ, ಮಡಿಕೇರಿ ದೂ.ಸಂ: 9844576429 ರವರನ್ನು ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಅವರು ತಿಳಿಸಿದ್ದಾರೆ.