ಗೋಣಿಕೊಪ್ಪಲು, ಸೆ.19: ಗೋಣಿಕೊಪ್ಪಲುವಿನ ಮಹಿಳಾ ದಸರಾ ಮಹಾಸಭೆಯು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಅಧ್ಯಕ್ಷರಾದ ಎಂ.ಮಂಜುಳ ಅಧ್ಯಕ್ಷತೆಯಲ್ಲಿ ಜರುಗಿತು. ನೂತನ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಚೇಂದಂಡ ಸುಮಿ ಸುಬ್ಬಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಗೋಣಿಕೊಪ್ಪಲು, ಸೆ.19: ಗೋಣಿಕೊಪ್ಪಲುವಿನ ಮಹಿಳಾ ದಸರಾ ಮಹಾಸಭೆಯು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಅಧ್ಯಕ್ಷರಾದ ಎಂ.ಮಂಜುಳ ಅಧ್ಯಕ್ಷತೆಯಲ್ಲಿ ಜರುಗಿತು. ನೂತನ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಚೇಂದಂಡ ಸುಮಿ ಸುಬ್ಬಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಸಕ್ರಿಯ ಪಾಲ್ಗೊಳ್ಳುವಿಕೆ ಯಶಸ್ವಿಗೆ ಕಾರಣ ಎಂದರು.

ಮಹಿಳಾ ದಸರಾ ಸಮಿತಿಯ ಅಧ್ಯಕ್ಷೆ ಎಂ. ಮಂಜುಳ ಮಾತನಾಡಿ, ಮಹಿಳೆಯರೆಲ್ಲರೂ ಒಂದಾಗಿ ಸೇರಲು ಮಹಿಳಾ ದಸರಾ ವೇದಿಕೆಯಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಕಡೇಮಾಡ ಕುಸುಮಾ ಜೋಯಪ್ಪ ಲೆಕ್ಕಪತ್ರ ಮಂಡಿಸಿ ವರದಿ ವಾಚಿಸಿದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಎಂ.ಮಂಜುಳ, ಉಪಾಧ್ಯಕ್ಷರಾಗಿ ಪಿ.ಧನಲಕ್ಷ್ಮಿ, ಕಡೇಮಾಡ ಕುಸುಮಾ ಜೋಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಚೇಂದೀರ ಪ್ರಭಾವತಿ, ಕಾರ್ಯದರ್ಶಿ ಯಾಗಿ ಧರ್ಮಸ್ಥಳ ಸಂಘದ ವಿಮಲ ನಾರಾಯಣ, ಖಜಾಂಚಿಯಾಗಿ ಒಡಿಪಿ ಸಂಸ್ಥೆಯ ಗೀತಾ ವಿಜಯ ಕುಮಾರ್ ಸೇರಿದಂತೆ 20 ಮಹಿಳಾ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ಚೇಂದೀರ ಪ್ರಭಾವತಿ ಸ್ವಾಗತಿಸಿ ವಂದಿಸಿದರು.