ಮಡಿಕೇರಿ, ಸೆ. 19: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ಒಳ್ಳೆಮೆಣಸು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವದರೊಂದಿಗೆ ಪರಸ್ಪರ ಸಮನ್ವಯತೆ ಸಾಧಿಸುವ ಸಲುವಾಗಿ; ಸದ್ಯದಲ್ಲೇ ಕಾಫಿ ಬೆಳೆಗಾರರ ಸಹಕಾರ ಸಂಘದಿಂದ ವಿಶೇಷ ಕಾರ್ಯಾಗಾರ ಏರ್ಪಡಿಸುವ ದಾಗಿ ಅಧ್ಯಕ್ಷ ಎಂ.ಬಿ. ದೇವಯ್ಯ ಭರವಸೆ ನೀಡಿದರು. ಇಂದು ಇಲ್ಲಿನ ಕೊಡವ ಸಮಾಜದಲ್ಲಿ ಏರ್ಪಡಿಸಿದ್ದ 54ನೇ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಸಭೆಯಲ್ಲಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಹಿರಿಯ ಸದಸ್ಯ ಕೆ.ಸಿ. ನಾಣಯ್ಯ ಹಾಗೂ ಇತರರು; ಕಾಫಿ ಮತ್ತು ಒಳ್ಳೆಮೆಣಸು ಬೆಲೆ ಕುಸಿತ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳು ಇರುವದರಿಂದ; ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಪ್ರತಿಕ್ರಿಯಿಸಿದ ಎಂ.ಬಿ. ಮಡಿಕೇರಿ, ಸೆ. 19: ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ಒಳ್ಳೆಮೆಣಸು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವದರೊಂದಿಗೆ ಪರಸ್ಪರ ಸಮನ್ವಯತೆ ಸಾಧಿಸುವ ಸಲುವಾಗಿ; ಸದ್ಯದಲ್ಲೇ ಕಾಫಿ ಬೆಳೆಗಾರರ ಸಹಕಾರ ಸಂಘದಿಂದ ವಿಶೇಷ ಕಾರ್ಯಾಗಾರ ಏರ್ಪಡಿಸುವ ದಾಗಿ ಅಧ್ಯಕ್ಷ ಎಂ.ಬಿ. ದೇವಯ್ಯ ಭರವಸೆ ನೀಡಿದರು. ಇಂದು ಇಲ್ಲಿನ ಕೊಡವ ಸಮಾಜದಲ್ಲಿ ಏರ್ಪಡಿಸಿದ್ದ 54ನೇ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಸಭೆಯಲ್ಲಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಹಿರಿಯ ಸದಸ್ಯ ಕೆ.ಸಿ. ನಾಣಯ್ಯ ಹಾಗೂ ಇತರರು; ಕಾಫಿ ಮತ್ತು ಒಳ್ಳೆಮೆಣಸು ಬೆಲೆ ಕುಸಿತ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳು ಇರುವದರಿಂದ; ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಎಂ.ಬಿ. ಕ್ರೋಢೀಕರಿಸಲಾಗುತ್ತಿದೆ ಎಂದರು. ಭವಿಷ್ಯದಲ್ಲಿ ನೂತನ ಎರಡು ಪೆಟ್ರೋಲ್ ಬಂಕ್ ಆರಂಭಿಸುವ ಚಿಂತನೆಯೂ ಇದೆ ಎಂದು ದೇವಯ್ಯ ವಿವರಿಸಿದರು.

ಕಾಫಿ ಸಂಸ್ಕರಣೆಗೆ ಸಲಹೆ : ಬೆಳೆಗಾರರು ಸಂಘದ ಘಟಕದಲ್ಲಿ ಕಾಫಿ ಸಂಸ್ಕರಣೆಯೊಂದಿಗೆ; ಮಾರುಕಟ್ಟೆ ದರದಲ್ಲಿ ತಮ್ಮ ಕಾಫಿಯನ್ನು ಕೂಡ ಸಂಘಕ್ಕೆ ನೀಡಿದರೆ, ಸಂಸ್ಥೆಯನ್ನು ಆರ್ಥಿಕ ಹೊಡೆತದಿಂದ ಇನ್ನಷ್ಟು ಸುಧಾರಣೆಗೆ ತರುವದು ಸಾಧ್ಯವೆಂದು ನೆನಪಿಸಿದರು.

ಸರಕಾರಗಳು ಕಬ್ಬು ಬೆಳೆಗಾರರು, ಸಕ್ಕರೆ ಉದ್ದಿಮೆಗಳು, ನೇಯ್ಗೆ ಉದ್ದಿಮೆ ಇತ್ಯಾದಿಗಳಿಗೆ ಸಾಲಮನ್ನದೊಂದಿಗೆ; ಆರ್ಥಿಕ ನೆರವು ಕಲ್ಪಿಸುವಂತೆ ಕಾಫಿ ಮತ್ತು ಒಳ್ಳೆಮೆಣಸು ಬೆಳೆಗಾರರ ನೆರವಿಗೂ ಬರುವಂತೆ ಪ್ರಯತ್ನಿಸಲು ಒತ್ತಾಯ ಕೇಳಿಬಂತು.

ಸಂಘದ ಆರ್ಥಿಕ ಸ್ಥಿತಿಗತಿ, ವಾರ್ಷಿಕ

(ಮೊದಲ ಪುಟದಿಂದ) ವರದಿ, ಭವಿಷ್ಯದ ಯೋಜನೆಗಳೊಂದಿಗೆ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾಫಿ ಮಂಡಳಿ ಹಾಗೂ ಸಂಘದ ನಡುವಿನ ವ್ಯಾಜ್ಯ ಮುಂತಾದ ವಿಷಯಗಳ ಪ್ರಸ್ತಾಪಗೊಂಡಿತು. ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ, ನಿರ್ದೇಶಕರುಗಳಾದ ಹೊಸೂರು ರಮೇಶ್ ಜೋಯಪ್ಪ, ಮುರುಳಿ ಕರುಂಬಮ್ಮಯ್ಯ, ಬಿ.ಡಿ. ಮಂಜುನಾಥ್, ಲೀಲಾ ಮೇದಪ್ಪ್ಪ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಸಹಿತ ನೂರಾರು ಬೆಳೆಗಾರರು ಪಾಲ್ಗೊಂಡಿದ್ದರು.