ಶನಿವಾರಸಂತೆ, ಸೆ. 19: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಕೊಡ್ಲಿಪೇಟೆಯ ಶ್ರೀ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ಸಂಘದ ಅಧ್ಯಕ್ಷ ಎಸ್.ಡಿ. ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು 2018-19ನೇ ಸಾಲಿನಲ್ಲಿ ರೂ. 75,68,200 ಲಕ್ಷಗಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 23ರಷ್ಟು ಡಿವಿಡೆಂಡ್ ನೀಡಲಾಗುವದು ಎಂದು ಘೋಷಿಸಿದರು. ಸಂಘದಲ್ಲಿ ಒಟ್ಟು 4861 ಸದಸ್ಯರಿದ್ದಾರೆ. ಪಾವತಿಯಾದ ಪಾಲು ಬಂಡವಾಳ ರೂ. 2,43,15,112, ಕ್ಷೇಮನಿಧಿ ರೂ. 76,50,638, ಇತರೆ ನಿಧಿಗಳು ರೂ. 73,97,425, ಸದಸ್ಯರ ಮೇಲಿನ ಸಾಲ ರೂ. 73,74,23,759 ಎಂದು ತಿಳಿಸಿದರು.

ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಉತ್ತಯ್ಯ ಮಾತನಾಡಿ, ಕೆಡಿಸಿಸಿ ಬ್ಯಾಂಕಿನ ಸಾಲ ಸೌಲಭ್ಯ ಮತ್ತು ಠೇವಣಾತಿಗಳ ಬಗ್ಗೆ ಮಾಹಿತಿ ನೀಡಿದರು.

ಸದಸ್ಯರುಗಳಾದ ಜಿ.ಆರ್. ಸುಬ್ರಮಣ್ಯ, ರಾಜಶೇಖರ್, ಎಸ್.ಕೆ. ಧರ್ಮ, ಅಲ್ತಾಫ್ ಹುಸೇನ್, ಜಯಪ್ಪ, ಲೋಕೇಶ್, ಮುತ್ತೇಗೌಡ, ಕೆ.ಟಿ. ಹರೀಶ್, ಬಾಬು ರಾಜೇಂದ್ರ ಪ್ರಸಾದ್, ಮಳಲಿ ನಾಗೇಶ್ ಹಾಗೂ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಸಂಘದ ಉಪಾಧ್ಯಕ್ಷೆ ಎ.ಎನ್. ಬಾನುಮತಿ, ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಬಿ.ಕೆ. ಯತೀಶ್, ಕೆ.ಸಿ. ಪ್ರಸನ್ನ, ಬಿ.ಎ. ವಸಂತ್, ಬಿ.ಕೆ. ಸುಬ್ರಮಣ್ಯಚಾರಿ, ಹೆಚ್.ಎನ್. ನಿರ್ಮಲ, ಬಿ.ಇ. ರಾಜು, ಕೆ.ಬಿ.ಯೋಗೇಶ್, ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಹೆಚ್.ಬಿ. ಸಮಂತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಡಿ. ನಾಗರಾಜ್, ಹಿರಿಯ ಸಹಾಯಕ ಹೆಚ್.ಎಸ್. ಸುರೇಶ್ ಹಾಗೂ ನೌಕರ ವರ್ಗದವರು ಉಪಸ್ಥಿತರಿದ್ದರು.

ವರದಿ ಮಂಡಿಸಿದ ಕೆ.ಡಿ. ನಾಗರಾಜ್ ಸ್ವಾಗತಿಸಿ, ನಿರ್ದೇಶಕ ಸುಬ್ರಮಣ್ಯಚಾರಿ ವಂದಿಸಿದರು.