ಪೆರಾಜೆ, ಸೆ. 19: ಬಂಡೆಗಳು ಜಾರಿಬಂದು ಆತಂಕ ಸೃಷ್ಟಿಸಿರುವ ಪೆರಾಜೆ ಗ್ರಾ.ಪಂ. ವ್ಯಾಪ್ತಿಯ ಕುಂಡಾಡು ಹಾಗೂ ಚಾಮಕಜೆ ಪ್ರದೇಶದ ಕೋಳಿಕಲ್ಲು ಮಲೆಗೆ ಇಂದು ಗಣಿ ಮತ್ತು ಭೂವಿಜ್ಞಾನಿಗಳ ಇಲಾಖೆಯ ಭೂವಿಜ್ಞಾನಿ ತಜ್ಞರು ಭೇಟಿ ನೀಡಿದ್ದಾರೆ.ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರಿಂದಲೂ ಮಾಹಿತಿ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟೇ ಗಣಿ ಮತ್ತು ಭೂವಿಜ್ಞಾನಿಗಳ ಇಲಾಖೆಗೆ ವರದಿ ಸಲ್ಲಿಸಬೇಕಿದ್ದು; ವರದಿ ಸಲ್ಲಿಸಿದ ಬಳಿಕ ಬಂಡೆ ಬರುವಿಕೆಗೆ ಕಾರಣ ಕಂಡು ಹಿಡಿಯಲಾಗುವದೆಂದು ಇಲಾಖೆ ಅಧಿಕಾರಿ ರೇಷ್ಮ ‘ಶಕ್ತಿ’ಗೆ ತಿಳಿಸಿದ್ದಾರೆ. -ಕಿರಣ್ ಕುಂಬಳಚೇರಿ