ಸೋಮವಾರಪೇಟೆ, ಸೆ.19: ವೀರಾಜಪೇಟೆಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕೊಡ್ಲಿಪೇಟೆ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಸಿ.ಎಸ್. ಸೃಷ್ಟಿ, ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾಳೆ.

ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸೃಷ್ಟಿ, ಚನ್ನಾಪುರ ಗ್ರಾಮದ ಸೋಮನಾಥ್ ಅವರ ಪುತ್ರಿ. ಶಾಲೆಯ ಪ್ರಾಂಶುಪಾಲ ಮಹೇಶ್, ಶಿಕ್ಷಿಕ ರೂಪ ಅವರುಗಳು ಈಕೆಗೆ ತರಬೇತಿ ನೀಡಿದ್ದಾರೆ.