ಸೋಮವಾರಪೇಟೆ, ಸೆ. 19: ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ, ಕೂಡಲೆ ಹಿಂಪಡೆಯಬೇಕೆಂದು ಒತ್ತಾಯಿಸಿ ಸೋಮವಾರಪೇಟೆ ವಕೀಲರ ಸಂಘದ ಪದಾಧಿಕಾರಿಗಳು ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.

ಈಗಿನ ತಿದ್ದುಪಡಿಯಿಂದ ಸಾರ್ವಜನಿಕರು, ಕಕ್ಷಿದಾರರು ಹಾಗು ವಕೀಲರ ಮೇಲೆ ದುಷ್ಪರಿಣಾಮ ಬೀರಲಿದೆ. ಕೂಡಲೆ ಕೇಂದ್ರ ಸರ್ಕಾರ ತಿದ್ದುಪಡಿಯನ್ನು ಹಿಂಪಡೆಯಲೇಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ತಿಮ್ಮಯ್ಯ ಒತ್ತಾಯಿಸಿದರು.

ಈ ಸಂದರ್ಭ ವಕೀಲರುಗಳಾದ ಚನ್ನಬಸವಯ್ಯ, ಪ್ರಕಾಶ್, ಜಯೇಂದ್ರ, ಮನೋಹರ, ಪ್ರೀತಿ, ರೂಪ, ದೀಪಕ್, ಪದ್ಮನಾಭ, ಮಂಜುನಾಥ್, ಕಾಟ್ನಮನೆ ವಿಠಲ್‍ಗೌಡ, ಶಿವಕುಮಾರ್, ಯತೀಶ್, ಕೃಷ್ಣಕುಮಾರ್, ಧರ್ಮಪ್ರಕಾಶ್ ಪರಮೇಶ್, ರಾಜೀವ್, ತೇಜಸ್, ಹೇಮಚಂದ್ರ, ನವೀನ್, ಬೋಪಣ್ಣ, ಪ್ರತಾಪ್, ರೂಪೇಶ್ ಮತ್ತಿತರರು ಉಪಸ್ಥಿತರಿದ್ದರು.

ವೀರಾಜಪೇಟೆ : ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ವಕೀಲರ ಸಂಘ ವತಿಯಿಂದ ನ್ಯಾಯಾಲಯದ ಕಲಾಪಕ್ಕೆ ತೆರಳದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಎಮ್.ಎಮ್. ನಂಜಪ್ಪ, ಉಪಾಧ್ಯಕ್ಷ ಎಮ್.ಎಸ್. ವೆಂಕಟೇಶ್, ಜಂಟಿ ಕಾರ್ಯದರ್ಶಿ ಕೆ.ವಿ. ಸುನಿಲ್, ಹಾಗೂ ಸಂಘದ ಸದಸ್ಯರಾದ ಎ.ಆರ್. ರಂಜನ್, ಹೆಚ್.ಆರ್. ಅನ್ವರ್ ಅಹ್ಮದ್, ವಿ.ಯಸ್. ಪ್ರೀತಮ್ ಹಾಗೂ ಸಂಘದ ಇನ್ನಿತರ ಸದಸ್ಯರು ಹಾಜರಿದ್ದರು.