ವೀರಾಜಪೇಟೆ, ಸೆ. 19: ಸಿಐಟಿಯು 4ನೇ ಜಿಲ್ಲಾ ಸಮ್ಮೇಳÀನವನ್ನು ತಾ. 22 ರಂದು ಸಿ.ಎಚ್ ಕರುಣಾಕರನ್ ನಗರ, ಡಾ ಐ.ಆರ್ ಅಸ್ರಣ್ಣ ಸಭಾಂಗಣ, ಬಿ.ಮಾದವ ವೇದಿಕೆ ಪುರಭವನದಲ್ಲಿ ನಡೆಸಲಾಗುವದು ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಐ.ಆರ್. ದುರ್ಗಾಪ್ರಸಾದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮ್ಮೇಳನದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು ಸರ್ಕಾರದ ಇಂದಿನ ಧೋರಣೆಯಿಂದಾಗಿ ಪ್ರತಿಯೊಬ್ಬರು ಕಂಗಾಲಾಗಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಬದಲಾಗಬೇಕು ಎನ್ನುವ ನಿರ್ಣಯವನ್ನು ಸಮ್ಮೇಳನದಲ್ಲಿ ಅಂಗೀಕರಿಸಿ ಕಳುಹಿಸಲಾಗುವದು ಎಂದು ಹೇಳಿದರು.

ಕಾರ್ಯದರ್ಶಿ ರಮೇಶ್ ಮಾತನಾಡಿ ಸಮ್ಮೇಳನದ ಉದ್ಘಾಟನೆಯನ್ನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಮಹಾಂತೇಶ್ ನೆರವೇರಿಸಲಿದ್ದಾರೆ. ಬಹಿರಂಗ ಅಧಿವೇಶನದಲ್ಲಿ ಕೊಡಗಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಚರ್ಚೆ ನಡೆಸಲಾಗುವದು. 2008ರ 7ನೇ ಕಾರ್ಮಿಕ ಆಯೋಗ ಅನುಷ್ಠಾನಗೊಳಿಸಿರುವದನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಮಹಾದೇವ್, ಖಜಾಂಚಿ ಎ.ಸಿ.ಸಾಬು, ಎನ್.ಡಿ ಕುಟ್ಟಪ್ಪ, ಜಂಟಿ ಕಾರ್ಯದರ್ಶಿ ಭರತ್, ಸ್ವಾಗತ ಸಮಿತಿ ಅಧ್ಯಕ್ಷ ರಜನಿಕಾಂತ್ ಉಪಸ್ಥಿತರಿದ್ದರು.