ಪೊನ್ನಂಪೇಟೆ, ಸೆ. 21 : ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿ ಹುಟ್ಟಿ ತಾ. 21 ಇಂದಿಗೆ 151 ವರ್ಷ ತುಂಬಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅಡ್ಡಂಡ ಕಾರ್ಯಪ್ಪ ರಚಿಸಿರುವ ಕವಿಯ ಬದುಕು- ಬರಹ ಕೃತಿ ‘ಹರದಾಸ ಅಪ್ಪಚಕವಿ’ ಯನ್ನು ಪ್ರಕಟಿಸಿದೆ. ಇದು ಭಾರತೀಯ ಏಳು ಭಾಷೆಗಳಲ್ಲಿ ಪ್ರಕಟಗೊಳ್ಳಲಿದೆ.

ಕನ್ನಡ ಕೃತಿ ಮೈಸೂರಿನ ಖ್ಯಾತ ರಂಗಕರ್ಮಿ ಮಂಡ್ಯ ರಮೇಶ್ ‘ನಟ ನರಂಗ ಶಾಲೆ’ಯಲ್ಲಿ ತಾ. 21ರಂದು (ಇಂದು) ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಮೈಸೂರಿನ ಸಾಹಿತ್ಯ - ಸಂಸ್ಕೃತಿ ಚಿಂತಕ ಡಾ. ಆದೇಂಗಡ ಕುಟ್ಟಪ್ಪನವರು ಕೃತಿ ಬಿಡುಗಡೆ ಮಾಡಲಿದ್ದು, ಕಲಾವಿದ ನೆಲ್ಲಮಕ್ಕಡ ಕಾವೇರಪ್ಪ ಅವರು ಉಪನ್ಯಾಸ ನೀಡಲ್ಲಿದ್ದಾರೆ. ಮಂಡ್ಯ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಕಾರ್ಯಪ್ಪ, ಅನಿತಾ ಉಪಸ್ಥಿತರಿರುತ್ತಾರೆ. ಈ ಸಮಾರಂಭದ ನಂತರ ಭೂಮಿ ಪ್ರತಿಷ್ಠಾನ ಕೊಡಗು ತಂಡದಿಂದ ‘ಕೊಡವ ನಾಟಕ ಬದ್‍ಕ್’ ಪ್ರದರ್ಶನವಿದೆ.

ಅಪ್ಪಚ್ಚಕವಿ ಹುಟ್ಟಿದ ದಿನವನ್ನು ‘ಕೊಡವ ತಕ್ಕ್ ಸಾಹಿತ್ಯ ದಿನ’ ಎಂದು ಆಚರಿಸಲಾಗುತ್ತಿದೆ.