ಸೋಮವಾರಪೇಟೆ,ಸೆ.20: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಂತ ಜೋಸೆಫರ ಪ್ರೌಢಶಾಲೆ ಇವರ ಆಶ್ರಯದಲ್ಲಿ ತಾ.21ರಂದು (ಇಂದು) ಗುರುವಂದನಾ ಕಾರ್ಯಕ್ರಮ ಸಂತ ಜೋಸೆಫರ ಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಕ.ಸಾ.ಪ.ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ತಿಳಿಸಿದ್ದಾರೆ.

ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿ.ಡಿ.ಪಿ.ಐ. ಪೆರಿಗ್ರಿನ್ ಎಸ್.ಮಚ್ಚಾಡೋ, ಓ.ಎಲ್.ವಿ. ಚರ್ಚ್‍ನ ಫಾದರ್ ಎಂ.ರಾಯಪ್ಪ, ಪ್ರಾಂಶುಪಾಲ ಅಂತೋಣಿರಾಜ್, ಜಿಪಂ.ಸದಸ್ಯರಾದ ಪೂರ್ಣಿಮಾ ಗೋಪಾಲ್, ತಾಪಂ ಸದಸ್ಯ ಬಿ.ಬಿ.ಸತೀಶ್, ಬೇಳೂರು ಗ್ರಾಪಂ ಅಧ್ಯಕ್ಷ ಭಾಗ್ಯ ಮಂಜುನಾಥ್, ಬಿ.ಇ.ಒ. ನಾಗರಾಜಯ್ಯ, ಬಳಗುಂದ ಗ್ರಾಪಂ ಸದಸ್ಯ ಯೋಗೇಂದ್ರ ಭಾಗವಹಿಸಲಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಾಲೆಗಳ, ಕನ್ನಡ ಶಿಕ್ಷಕರುಗಳಾದ ಬಿ.ಎ.ಸನತ್, ಸುಜಾತ ಕುಮಾರಿ, ಎನ್.ಮಹಾದೇವಮ್ಮ, ಸಿ.ಜಿ.ದಿನೇಶ್, ಎಸ್.ಪಿ.ಸ್ಮಿತಾ ಅವರುಗಳನ್ನು ಸನ್ಮಾನಿಸಲಾಗುತ್ತದೆ ಎಂದು ವಿಜೇತ್ ತಿಳಿಸಿದ್ದಾರೆ.