ಮಡಿಕೇರಿ, ಸೆ. 20: ಮಡಿಕೇರಿ ದಸರಾ ಕ್ರೀಡಾ ಸಮಿತಿಯ ಆಶ್ರಯದಲ್ಲಿ ತಾ. 21 ರಂದು (ಇಂದು) ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 6.30ಕ್ಕೆ ಪ್ರಾರಂಭಗೊಳ್ಳಲಿರುವ ಕ್ರೀಡಾಕೂಟ; ತಾ. 22 ರಂದು ಮುಂದುವರಿಯಲಿದೆ.

ಆ ಬಳಿಕ ಅ. 1 ರಂದು ಕಬಡ್ಡಿ ಪಂದ್ಯಾಟದೊಂದಿಗೆ ಸಂಜೆ 5.30ಕ್ಕೆ ಸಮಾರೋಪಗೊಳ್ಳಲಿದೆ. ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪ್ರಾರಂಭಗೊಳ್ಳುವ ಕ್ರೀಡಾಕೂಟಕ್ಕೆ ಅತಿಥಿ ಗಣ್ಯರು ಚಾಲನೆ ನೀಡಲಿದ್ದಾರೆ. ಅ. 1ರ ಪಂದ್ಯಾಟ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.