ಮಡಿಕೇರಿ, ಸೆ. 20: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಕ್ಟೋಬರ್ 1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ತಾ. 26 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಹಿರಿಯ ನಾಗರಿಕರು ಸ್ಪರ್ಧೆಯ ದಿನದಂದು ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ವಾಹನ ಪರವಾನಗಿ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಇವುಗಳಲ್ಲಿ ಯಾವದಾದರು ಒಂದು ಪ್ರತಿಯನ್ನು ಹಾಜರುಪಡಿಸಬೇಕು.

ಪುರುಷರಿಗೆ ಕ್ರೀಡಾ ಸ್ಪರ್ಧೆಗಳು: 60 ರಿಂದ 70 ವರ್ಷದವರಿಗೆ 100 ಮೀ. ಓಟ, 3 ಕೆ.ಜಿ.ಗುಂಡೆಸೆತ, 71 ರಿಂದ 80 ವರ್ಷದವರಿಗೆ 75 ಮೀ. ಓಟ, 3 ಕೆ.ಜಿ. ಗುಂಡೆಸೆತ, 80 ವರ್ಷ ಮೇಲ್ಪಟ್ಟವರಿಗೆ 200 ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ.

ಮಹಿಳೆಯರಿಗೆ ಕ್ರೀಡಾ ಸ್ಪರ್ಧೆಗಳು : 60 ರಿಂದ 70 ವರ್ಷದವರಿಗೆ 400 ಮೀ. ನಡಿಗೆ ಕ್ರಿಕೆಟ್ ಚೆಂಡು ಎಸೆತ, 71 ರಿಂದ 80 ವರ್ಷದವರಿಗೆ 200 ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ, 80 ವರ್ಷ ಮೇಲ್ಪಟ್ಟವರಿಗೆ 100 ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ. ಮಹಿಳೆಯರಿಗೆ ಮತ್ತು ಪುರುಷರಿಗೆ ಸಾಂಸ್ಕøತಿಕ ಸ್ಪರ್ಧೆಗಳು. 60 ರಿಂದ 80 ವರ್ಷ ಮೇಲ್ಪಟ್ಟವರಿಗೆ ಏಕ ಪಾತ್ರಾಭಿನಯ, ಜಾನಪದ ಗೀತೆ ಸ್ಪರ್ಧೆ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08272-222830 ಹಾಗೂ 222829 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್. ಸಂಪತ್ ಕುಮಾರ್ ಅವರು ತಿಳಿಸಿದ್ದಾರೆ. ಬ್ಯಾಂಕ್ ಖಾತೆ ಹೊಂದಿರುವ ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್‍ನ ಪ್ರತಿ ಕಡ್ಡಾಯವಾಗಿ ತರುವಂತೆ ತಿಳಿಸಿದ್ದಾರೆ.