ಮಡಿಕೇರಿ, ಸೆ. 20: ನಗರದ ವರ್ತಕರು ಅಂಗಡಿಗಳಲ್ಲಿ 40 ಮೈಕ್ರಾನ್‍ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಸದಂತೆ ಇಂದು ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ಲಾಸ್ಟಿಕ್ ನಿರ್ಮೂಲನೆ ಕಾಯ್ದೆಯಡಿ ಈ ಸಂಬಂಧ ನಗರಸಭೆ ಆರೋಗ್ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ತಕರಿಗೆ ಖುದ್ದು ಎಚ್ಚರಿಸಿದ್ದು; ಮುಂದೆ ಈ ಬಗ್ಗೆ ನಿರ್ಲಕ್ಷಿಸಿದರೆ ಕ್ರಮ ಜರುಗಿಸಲಾಗುವದು ಎಂದು ಆಯುಕ್ತ ಎಂ.ಎಲ್. ರಮೇಶ್ ತಿಳಿಸಿದ್ದಾರೆ. -ಚಿತ್ರ, ವರದಿ : ಟಿ.ಜಿ. ಸತೀಶ್