ವೀರಾಜಪೇಟೆ, ಸೆ.20: ವೀರಾಜಪೇಟೆ ತಾಲೂಕಿನ ನಾಯಾಲಯ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸೂಚನೆ ಮೇರೆಗೆ ಕೇಂದ್ರ ಸರ್ಕಾರ ಮೋಟಾರು ಕಾಯಿದೆ ತಿದ್ದುಪಡಿ ವಿರೋಧಿಸಿ ಮತ್ತು ಜನಪರ ಆನೇಕ ವಿರೋಧ ಕೆಲಸಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಮುಖ್ಯವಾಗಿ ಜನಸಾಮಾನ್ಯರಿಗೆ ತೊಂದರೆ ನೀಡುವ ಕಾಯಿದೆಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ವಿರೋಧಿಸಿ ವೀರಾಜಪೇಟೆ ತಾಲೂಕಿನ ತಹಶೀಲ್ದಾರರ ಮುಖಾಂತರ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಹಾಗೂ ಇತರೆ ವಕೀಲರು ಮನವಿ ಸಲ್ಲಿಸಿದರು. ನಂತರ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಒಂದು ದಿನ ಸಾಂಕೇತಿಕವಾಗಿ ಹೊರಗುಳಿದರು.

ಈ ಸಂದರ್ಭ ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷÀ ಎಂ. ಎಂ. ನಂಜಪ್ಪ, ಉಪಾಧ್ಯಕ್ಷ ಎಂ. ಎಸ್. ವೆಂಕಟೇಶ, ಬಿ.ಎನ್. ಸುಬ್ಬಯ್ಯ, ಕೆ. ವಿ. ಸುನಿಲ್, ಪ್ರೀತಂ ಅನ್ವರ್, ಡಿ.ಸಿ. ಧ್ರುವ, ಪುಷ್ಪರಾಜ್, ಮಹಿಳಾ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.